ಬೆಂಗಳೂರು : ಊಟದ ನಂತರ ಸುಮ್ಮನೆ ಕೂರುತ್ತೀರಾ? ಹಾಗಿದ್ರೆ, ಇನ್ಮುಂದೆ ಈ ತಪ್ಪು ಮಾಡಬೇಡಿ.
ಈ ಅಭ್ಯಾಸದಿಂದ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರುತ್ತದೆ. ಊಟದ ನಂತರ ವಾಕ್ ಮಾಡುವುದು ಸೂಕ್ತ. ಇದರಿಂದ ನಮ್ಮ ಜೀರ್ಣಾಂಗ ವ್ಯವಸ್ಥೆ ಆರೋಗ್ಯಕರವಾಗಿರುತ್ತದೆ.
ವಾಕಿಂಗ್ ಮಾಡುವುದರಿಂದ ಹೊಟ್ಟೆಯ ಕೊಬ್ಬನ್ನೂ ಕಡಿಮೆ ಮಾಡಬಹುದು. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ವಾಕಿಂಗ್ ಟಾಕ್ಸಿಕ್ ಅನ್ನು ಹೊರಹಾಕುತ್ತದೆ. ಇದು ಚಯಾಪಚಯನ್ನು ಹೆಚ್ಚಿಸುತ್ತದೆ.
ಈ ಕೆಟ್ಟ ಅಭ್ಯಾಸ ಬೇಡ
ಇನ್ನೂ, ಆಹಾರ (ಊಟ) ಸೇವಿಸಿದ ತಕ್ಷಣ ದೇಹದಲ್ಲಿ ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚಾಗಲು ಶುರುವಾಗುತ್ತದೆ. ಇದಕ್ಕೆ ವಾಕಿಂಗ್ ಸೂಕ್ತ ಮದ್ದು. ವಾಕಿಂಗ್ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ.
ರಾತ್ರಿ ಊಟದ ನಂತರ ಕೆಲವರು ತಿಂಡಿ ಸೇವಿಸುತ್ತಾರೆ. ಇದು ಕೆಟ್ಟ ಅಭ್ಯಾಸ. ಇದನ್ನು ತಡೆಯಲು ರಾತ್ರಿ ಊಟದ ನಂತರ ವಾಕ್ ಮಾಡಬೇಕು. ಇದು ಆಹಾರದ ಬಯಕೆಯನ್ನು ಕಡಿಮೆ ಮಾಡುತ್ತದೆ.