Thursday, December 19, 2024

25 ಲಕ್ಷ ಹೊಸ ಫಲಾನುಭವಿಗಳಿಗೆ ಅನ್ನಭಾಗ್ಯ ಹಣ

ಬೆಂಗಳೂರು : ಅನ್ನಭಾಗ್ಯ ಯೋಜನೆಯಡಿ ಬಿಪಿಎಲ್​(BPL), ಅಂತ್ಯೋದಯ ಕಾರ್ಡ್​ದಾರರ ಖಾತೆಗೆ ಆಗಸ್ಟ್ ತಿಂಗಳಿನ 2ನೇ ಕಂತು ಹಣ ಜಮೆ ಮಾಡಲಾಗುತ್ತಿದೆ. ರಾಜ್ಯಾದ್ಯಂತ 1.03 ಕೋಟಿ ಕಾರ್ಡ್​ಗಳ 3.69 ಕೋಟಿ ಫಲಾನುಭವಿಗಳಿಗೆ 606 ಕೋಟಿ ರೂ. ಜಮೆಯಾಗಲಿದೆ.

ಜುಲೈನಲ್ಲಿ 97 ಲಕ್ಷ ಕಾರ್ಡ್​ಗಳ 3.45 ಕೋಟಿ ಫಲಾನುಭವಿಗಳಿಗೆ 566 ಕೋಟಿ ರೂ. ಹಾಕಲಾಗಿತ್ತು. ಆಗಸ್ಟ್​ನಲ್ಲಿ 25 ಲಕ್ಷಕ್ಕೂ ಅಧಿಕ ಫಲಾನುಭವಿಗಳಿಗೆ ಹಣ ಜಮೆ ಮಾಡಲಾಗಿದ್ದು, ಒಟ್ಟು ಶೇ.87 ಫಲಾನುಭವಿಗಳಿಗೆ ಯೋಜನೆಯಡಿ ಹಣ ಸಿಗುತ್ತಿದೆ.

22 ಲಕ್ಷ ಕಾರ್ಡ್​ಗಳಿಗಿಲ್ಲ ದುಡ್ಡು

ಕುಟುಂಬದ ಮುಖ್ಯಸ್ಥರನ್ನು ಆಯ್ಕೆ ಮಾಡದಿರುವುದು, ಬ್ಯಾಂಕ್ ಖಾತೆ ಇಲ್ಲದಿರುವುದು, ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಮಾಡದಿರುವುದು ಹಾಗೂ ರೇಷನ್ ಕಾರ್ಡ್​ಗೆ ಇಕೆವೈಸಿ (EKYC) ಮಾಡಿಸದಿರುವುದು ಸೇರಿ ಇತರ ಕಾರಣಗಳಿಂದ ಅಂದಾಜು 22 ಲಕ್ಷ ಬಿಪಿಎಲ್​ ಕಾರ್ಡ್​ಗಳು ಯೋಜನೆಯಿಂದ ಹೊರಗುಳಿದಿದ್ದವು.

ಈ ಪೈಕಿ 7 ಲಕ್ಷ ಕಾರ್ಡ್​ಗಳ ಸಮಸ್ಯೆಗಳು ಆಹಾರ ಇಲಾಖೆಯ ಮುತುವರ್ಜಿಯಿಂದ ಬಗೆಹರಿದಿದ್ದು, ಆಗಸ್ಟ್​ನಲ್ಲಿ 25 ಲಕ್ಷಕ್ಕೂ ಅಧಿಕ ಹೊಸ ಫಲಾನುಭವಿಗಳಿಗೆ ಸೌಲಭ್ಯ ಸಿಕ್ಕಿದೆ. ಉಳಿದ 15 ಲಕ್ಷ ಕಾರ್ಡ್​ಗಳ ಸಮಸ್ಯೆಯನ್ನು ಸೆಪ್ಟೆಂಬರ್ ವೇಳೆಗೆ ಬಗೆಹರಿಸಲು ಆಹಾರ ಇಲಾಖೆ ಮುಂದಾಗಿದೆ.

RELATED ARTICLES

Related Articles

TRENDING ARTICLES