Monday, December 23, 2024

ಇಂದೇ ಯಜಮಾನಿಯ ಕೈ ಸೇರಲಿದೆ 2,000 ರೂ.

ಬೆಂಗಳೂರು : ಇಂದು ಒಂದು ಬಟನ್ ಒತ್ತಿದ್ರೆ ಸಾಕು ಯಜಮಾನಿಯರ ಅಕೌಂಟ್​ಗೆ 2,000 ರೂಪಾಯಿ ಜಮಾ ಆಗಲಿದೆ.

ಕಾಂಗ್ರೆಸ್​ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಗಳ ಪೈಕಿ ಒಂದಾಗಿರುವ ಗೃಹಲಕ್ಷ್ಮೀ ಯೋಜನೆ ಇಂದು ಮೈಸೂರಿನಲ್ಲಿ ಅಧಿಕೃತವಾಗಿ ಉದ್ಘಾಟನೆಯಾಗಲಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಇಡೀ ಸರ್ಕಾರವೇ ಮುಂದೆ ನಿಂತು ಈ ಸಮಾರಂಭವನ್ನು ಆಯೋಜಿಸಿದೆ. ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ಈ ಯೋಜನೆಯನ್ನು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ರಾಹುಲ್‌ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಭಾಗಿಯಾಗಲಿದ್ದಾರೆ.

ರಾಜ್ಯದ ನಾನಾ ಜಿಲ್ಲೆಗಳಿಂದ ಸುಮಾರು ಒಂದೂವರೆ ಲಕ್ಷ ಗೃಹಲಕ್ಷ್ಮೀ(ಮಹಿಳೆಯರು) ಈ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ. ಸುಮಾರು 10,000ಕ್ಕೂ ಅಧಿಕ ಹಳ್ಳಿಗಳಲ್ಲಿ ಈ ಕಾರ್ಯಕ್ರಮವನ್ನು ಎಲ್​ಇಡಿ ಪರದೆಯಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ.

ಖಾತೆಗೆ 2,000 ರೂ.

ಸರ್ಕಾರ ಈಗಾಗಲೇ ಡಿಬಿಟಿಗೆ ವ್ಯವಸ್ಥೆ ಮಾಡಿಕೊಂಡಿದ್ದು, ಇಂದೇ ಮೊದಲ ಕಂತಿನ 2,000 ರೂ. ಹಣ ಯಜಮಾನಿಯ ಕೈ ಸೇರಲಿದೆ. ರಾಜ್ಯಾದ್ಯಂತ ಸುಮಾರು 1.1 ಕೋಟಿ ಯಜಮಾನಿಯರು ಇದಕ್ಕೆ ಅರ್ಜಿ ಸಲ್ಲಿಸಿದ್ದಾರೆ.

RELATED ARTICLES

Related Articles

TRENDING ARTICLES