ವಿಜಯಪುರ : ಕಾವೇರಿ ನೀರು ವಿವಾದ ಕುರಿತು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರತಿಕ್ರಿಯೆ ನೀಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ರಾಜ್ಯದಲ್ಲಿರುವ ಬರದ ವಾತಾವರಣವನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರ ಕಾವೇರಿ ನೀರು ನಿಯಂತ್ರಣ ಪ್ರಾಧಿಕಾರದ ಮುಂದೆ ವಾದ ಮಂಡಿಸಬೇಕು ಎಂದು ಹೇಳಿದ್ದಾರೆ.
ಯಾವುದೇ ಕಾರಣಕ್ಕೂ ಕಾವೇರಿ ನೀರನ್ನು ತಮಿಳುನಾಡಿಗೆ ಬಿಡಬಾರದು. ಅವರಿಗೆ ವ್ಯವಸಾಯಕ್ಕೆ ನೀರು ಬೇಕು, ನಮಗೆ ಕುಡಿಯುವುದಕ್ಕೆ ನೀರು ಬೇಕಿದೆ. ಸರ್ಕಾರ ಗಟ್ಟಿ ನಿರ್ಧಾರ ಮಾಡಲಿ, ನಾವು ಸರ್ಕಾರದೊಂದಿಗೆ ಇದ್ದೇವೆ. ಕಾವೇರಿ ನೀರನ್ನು ಬಿಡುವುದನ್ನು ಮೊದಲು ನಿಲ್ಲಿಸಲಿ ಎಂದು ಒತ್ತಾಯಿಸಿದ್ದಾರೆ.
ರಾಜ್ಯದಲ್ಲಿರುವ ಬರದ ವಾತಾವರಣವನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರ ಕಾವೇರಿ ನೀರು ನಿಯಂತ್ರಣ ಪ್ರಾಧಿಕಾರದ ಮುಂದೆ ವಾದ ಮಂಡಿಸಬೇಕು.
ಯಾವುದೇ ಕಾರಣಕ್ಕೂ ಕಾವೇರಿ ನೀರನ್ನು ತಮಿಳುನಾಡಿಗೆ ಬಿಡಬಾರದು, ಅವರಿಗೆ ವ್ಯವಸಾಯ ನೀರು ಬೇಕು ನಮಗೆ ಕುಡಿಯುವುದಕ್ಕೆ ನೀರು ಬೇಕಿದೆ.
ಸರ್ಕಾರ ಗಟ್ಟಿ ನಿರ್ಧಾರ ಮಾಡಲಿ, ನಾವು ಸರ್ಕಾರದೊಂದಿಗೆ…
— Basanagouda R Patil (Yatnal) (@BasanagoudaBJP) August 29, 2023
ಇಂದು CWMA ಸಭೆ
ಇಂದು ಕಾವೇರಿ ವಿವಾದ ಕುರಿತಂತೆ CWMA ಸಭೆ ನಡೆಯಲಿದೆ. ಸಭೆಯಲ್ಲಿ ರಾಜ್ಯದ ಜಲ ಸಂಪನ್ಮೂಲ ಇಲಾಖೆಯ ಕಾರ್ಯದರ್ಶಿ ಭಾಗಿಯಾಗಲಿದ್ದಾರೆ. ಎಷ್ಟು ಕ್ಯೂಸೆಕ್ ನೀರು ಬಿಡಬೇಕು ಅಂತ ಇಂದೇ ಅಧಿಕೃತವಾಗಿ ನಿರ್ಧಾರ ಆಗಲಿದೆ. ಸಭೆಯಲ್ಲಿ ಸೂಚನೆ ಅಥವಾ ಆದೇಶ ನೀಡಿದ್ರೆ ಆಗ ತಮಿಳುನಾಡಿಗೆ ನೀರು ಹರಿಸಬೇಕಾಗುತ್ತದೆ.