Monday, December 23, 2024

ಇವ್ನು ದಾವಣಗೆರೆ ಲೂಟಿ ಹೊಡೆಯೋಕೆ ಬಂದವ್ನೆ : ಸಚಿವ ಮಲ್ಲಿಕಾರ್ಜುನ್

ದಾವಣಗೆರೆ : ಸ್ಮಾರ್ಟ್ ಸಿಟಿ ಅವ್ಯವ್ಯಹಾರ ಆರೋಪದಲ್ಲಿ ನನ್ನ ಪಾತ್ರವಿಲ್ಲ ಎಂಬ ಸಂಸದ ಡಾ.ಜಿ.ಎಂ ಸಿದ್ದೇಶ್ವರ ಹೇಳಿಕೆಗೆ ಸಚಿವ ಎಸ್​.ಎಸ್ ಮಲ್ಲಿಕಾರ್ಜುನ್ ಕಿಡಿಕಾರಿದ್ದಾರೆ.

ದಾವಣಗೆರೆಯಲ್ಲಿ ಮಾತನಾಡಿರುವ ಅವರು, ಇವನು ದಾವಣಗೆರೆಗೆ ಲೂಟಿ ಹೊಡೆಯೊಕೆ ಅಂತಾನೆ ಬಂದಿದ್ದಾನೆ ಎಂದು ಏಕ ವಚನದಲ್ಲೇ ಗುಡುಗಿದ್ದಾರೆ.

ಸ್ಮಾರ್ಟ್ ಸಿಟಿ ತಂದಿದ್ದು ನಾವು. ಅದರಲ್ಲಿ ಸಿದ್ದೇಶ್ವರ, ಬೈರತಿ ಬಸವರಾಜ್ ಸೇರಿ ಸಾಕಷ್ಟು ಕೊಳ್ಳೆ ಹೊಡೆದಿದ್ದಾರೆ. ಬಿಜೆಪಿ ಮಾಜಿ ಹಿರಿಯ ಶಾಸಕ ಎಸ್.ಎ ರವೀಂದ್ರನಾಥ್ ಅವರು ನನಗೆ ಸಂಬಂಧದಲ್ಲಿ ಅಣ್ಣನಾಗಬೇಕು. ಇವನು ಸಂಬಂಧಿನಿನೇ ಸಿದ್ದೇಶ್ವರಕ್ಕಿಂತ ಮೊದಲು ರವೀಂದ್ರನಾಥ್ ಪರಿಚಯ ಇದೆ ಎಂದು ಹೇಳಿದ್ದಾರೆ.

ಮೂವರನ್ನ ಹಾಳು ಮಾಡಿದ್ದಾನೆ

ರವೀಂದ್ರನಾಥ್ ಅವರಿಗೆ ಒಂದು ತೂಕ ಇದೆ. ಅವರು ಹೋರಾಟದಿಂದ ಮೇಲೆ ಬಂದಿದ್ದರಿಂದ ಅವರ ಮೇಲೆ ಗೌರವ ಇದೆ. ಆದರೆ, ಅವರಿಗಿರುವ  ಗೌರವ ಇವನಿಗಿಲ್ಲ. ಇವನು ಮೂವರನ್ನ ಹಾಳು ಮಾಡಿದ್ದಾನೆ. ಮಾಜಿ ಶಾಸಕ ರವೀಂದ್ರನಾಥ್, ಎಂ.ಪಿ ರೇಣುಕಾಚಾರ್ಯ, ಮಾಡಾಳು ವೀರುಪಾಕ್ಷಪ್ಪ ಅವರನ್ನು ಹಾಳು ಮಾಡಿದ್ದು ಸಿದ್ದೇಶ್ವರ ಎಂದು ಸಿದ್ದೇಶ್ವರ ಹೆಸರು ಹೇಳುತಿದ್ದಂತೆ ನಿಗಿನಿಗಿ ಕೆಂಡವಾಗಿದ್ದಾರೆ.

RELATED ARTICLES

Related Articles

TRENDING ARTICLES