Wednesday, October 2, 2024

ಆರ್​​ಸಿಬಿ ಜೆರ್ಸಿ ದುರ್ಬಳಕೆ: ಜೈಲರ್​ ಸಿನಿಮಾ ತಂಡಕ್ಕೆ ದೆಹಲಿ ಹೈಕೋರ್ಟ್​ ಖಡಕ್​ ಸೂಚನೆ​

ನವದೆಹಲಿ : ಅನುಮತಿ ಇಲ್ಲದೇ ರಾಯಲ್​ ಚಾಲೆಂಜರ್ಸ್​ ಜೆರ್ಸಿಯನ್ನು ಜೈಲರ್​ ಸಿನಿಮಾದ ದೃಶ್ಯವೊಂದರಲ್ಲಿ ಸುಪಾರಿ ಕಿಲ್ಲರ್​ ಪಾತ್ರಧಾರಿ ಬಳಕೆ ಮಾಡಿಕೊಂಡು ಅವಹೇಳನ ಮಾಡಲಾಗಿದೆ ಎನ್ನುವ ಕಾರಣಕ್ಕೆ ದೆಹಲಿ ಕೋರ್ಟ್​ ಮೆಟ್ಟಿಲೇರಿದ್ದ ಆರ್​ಸಿಬಿ ಜರ್ಸಿಯ ದೃಶ್ಯವನ್ನು ತೆಗೆಯುವಂತೆ ಆರ್​ಸಿಬಿ ಮುಖ್ಯಸ್ಥರು ದೆಹಲಿ ಕೋರ್ಟ್​ ಮೆಟ್ಟಿಲೇರಿದ್ದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಪ್ಟೆಂಬರ್​ 1 ರಿಂದ ಎಲ್ಲ ಚಿತ್ರಮಂದಿರಗಳಲ್ಲಿ ಆ ದೃಶ್ಯವನ್ನು ತೆಗೆದು ಪ್ರದರ್ಶನ ಮಾಡದಂತೆ ಜೈಲರ್​ ಸಿನಿಮಾ ತಂಡಕ್ಕೆ ದೆಹಲಿ ಹೈಕೋರ್ಟ್​ ಇದೀಗ ನಿರ್ದೇಶನ ನೀಡಿದೆ.

ಆರ್​ಸಿಬಿ ತಂಡದ ಜೆರ್ಸಿಯನ್ನು ಅವಹೇಳನಕಾರಿಯಾಗಿ ಬಳಸಿದ್ದಕ್ಕಾಗಿ ಚಲನಚಿತ್ರ ನಿರ್ಮಾಪಕರ ವಿರುದ್ಧ ಐಪಿಎಲ್ ತಂಡ, ರಾಯಲ್ ಚಾಲೆಂಜರ್ಸ್ ಸ್ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್ ಸಲ್ಲಿಸಿದ ಮೊಕದ್ದಮೆಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪ್ರತಿಭಾ ಎಂ ಸಿಂಗ್ ಈ ಆದೇಶವನ್ನು ನೀಡಿದ್ದಾರೆ. ಜೈಲರ್​ ಸಿನಿಮಾವನ್ನು ಟಿವಿ, ಸ್ಯಾಟಲೈಟ್​ ಅಥವಾ ಯಾವುದೇ ಒಟಿಟಿ ವೇದಿಕೆಯಲ್ಲಿ ಬಿಡುಗಡೆ ಮಾಡುವುದಕ್ಕೂ ಮೊದಲು ಚಿತ್ರದ ಬದಲಾದ ಆವೃತ್ತಿಯನ್ನು ಹೊಂದಿರಬೇಕು ಎಂದು ಕೋರ್ಟ್​ ಹೇಳಿದೆ.

ಕೋರ್ಟ್​ ಸೂಚನೆ ಬಳಿಕ ಜೈಲರ್​ ಚಿತ್ರದ ನಿರ್ಮಾಪಕರು ಮತ್ತು IPL ತಂಡವು ವಿವಾದವನ್ನು ಬಗೆಹರಿಸಿಕೊಳ್ಳಲು ಮುಂದಾಗಿದೆ. ಜರ್ಸಿಯನ್ನು ಹೊಂದಿರುವ ದೃಶ್ಯಗಳನ್ನು ತೆಗೆದು ಹಾಕಲು ಜೈಲರ್​ ಚಿತ್ರತಂಡ ಒಪ್ಪಿದೆ. ಸೆಪ್ಟೆಂಬರ್ 1ರ ಒಳಗೆ ಚಿತ್ರಮಂದಿರ ಆವೃತ್ತಿಯಲ್ಲಿ ಬದಲಾವಣೆಯನ್ನು ಕೈಗೊಳ್ಳಲಾಗುವುದು ಎಂದು ಸಿನಿಮಾ ತಂಡ ಭರವಸೆ ನೀಡಿದೆ.

RELATED ARTICLES

Related Articles

TRENDING ARTICLES