ಬೆಂಗಳೂರು : ಅವಿರೋಧವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನನ್ನನ್ನು ಆಯ್ಕೆ ಮಾಡಿದ್ದಾರೆ. ರಾಜ್ಯ ಸರ್ಕಾರಕ್ಕೆ ಧನ್ಯವಾದ ತಿಳಿಸುತ್ತೇನೆ ಎಂದು ಸಂಗೀತ ನಿರ್ದೇಶಕ ಹಂಸಲೇಖ ಹೇಳಿದರು.
ಬೆಂಗಳೂರಿನಲ್ಲಿ ಪವರ್ ಟಿವಿಯೊಂದಿಗೆ ಮಾತನಾಡಿರುವ ಅವರು, ಮೊದಲಿಗೆ ಹಂಸಲೇಖ ಅನ್ನೋ ಪಾತ್ರಕ್ಕೆ ಚಪ್ಪಾಳೆ ಹೊಡೆಯಬೇಕು. ಇದು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕನಸು ಎಂದು ತಿಳಿಸಿದರು.
ಕಳೆದ ವರ್ಷದಲ್ಲಿ ನನ್ನ ಆರೋಗ್ಯದಲ್ಲಿ ಏರುಪೇರಾಗಿತ್ತು. ಆಗ ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ನನ್ನ ಆರೋಗ್ಯ ವಿಚಾರಿಸಿದ್ರು. ಈಗ ನನಗೆ ದಸರ ಕಾರ್ಯಕ್ರಮವನ್ನು ಉದ್ಘಾಟನೆ ಮಾಡುವ ಅವಕಾಶ ನೀಡಿದ್ದಾರೆ. ಸಿಎಂ ಹಾಗೂ ಡಿಸಿಎಂಗೆ ಎಲ್ಲಾ ಕಲಾವಿದರ ಪರವಾಗಿ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದು ಹೇಳಿದರು.
ಕನ್ನಡದ ಕಾಲನ್ನು ಹಿಡಿದುಕೊಂಡ್ರೆ..!
ಪ್ರಜಾಪ್ರತಿನಿಧಿ ಕನಸು ಈಗ ನನಸಾಗಿದೆ. ನಾನು ಪ್ರಜಾ ಪ್ರತಿನಿಧಿ ಆಗಿದ್ದೇನೋ ಇಲ್ವೋ ಗೊತ್ತಿಲ್ಲ. ಆದರೆ, ಕಲಾ ಪ್ರತಿನಿಧಿ ಆಗಿದ್ದೀನಿ. ಸದ್ಯಕ್ಕೆ ಉದ್ಘಾಟನಾ ಸಮಾರಂಭದಲ್ಲಿ ಯಾವುದೇ ಹಾಡು ಹೇಳುವ ಪ್ಲ್ಯಾನ್ ಇಲ್ಲ. ಆದರೆ, ಸದಾ ಹಾಡು ನನ್ನ ಎದೆಯಲ್ಲಿರುತ್ತವೆ. ಕನ್ನಡ ಎಂದರೆ ಎಲ್ಲಾರು ಒಂದಾಗಬೇಕು. ಕನ್ನಡವೇ ನಮ್ಮ ಸ್ವಾತಂತ್ರ್ಯದ ಗಾಳಿ. ಕನ್ನಡದ ಕಾಲನ್ನು ಹಿಡಿದುಕೊಂಡರೆ ಅದು ನಮ್ಮನ್ನು ಕಾಪಾಡುತ್ತದೆ ಎಂದು ನುಡಿದರು.
ಹೊಸ ಹಾಡನ್ನು ಕಂಪೋಸ್ ಮಾಡ್ತೇವೆ
ಕನ್ನಡವನ್ನು ಶಾಂತಿ ಮಂತ್ರ ಕನ್ನಡ ಎನ್ನುವುದು, ಶಾಂತಿ ಮಂತ್ರ ಕನ್ನಡವನ್ನು ನಾವು ಎಲ್ಲೆಡೆ ಪಸರಿಸಬೇಕು. ಒಂದು ವೇಳೆ ಹಾಡುವ ಅವಕಾಶ ಇದ್ದರೆ, ಹೊಸ ಹಾಡನ್ನು ಕಂಪೋಸ್ ಮಾಡಿ ಹಾಡ್ತೇವೆ. ನನಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಬಗ್ಗೆ ಹಾಡು ಮಾಡಬೇಕೆಂಬ ಕನಸಿದೆ. ಜಯ ಹೇ ನಾಲ್ವಡಿ ಎಂದು ಒಂದು ವೇಳೆ ಅವಕಾಶ ಸಿಕ್ಕರೆ ಹಾಡುತ್ತೇನೆ ಎಂದು ಹಂಸಲೇಖ ಸಂತಸ ಹಂಚಿಕೊಂಡರು.