ಕಲಬುರಗಿ : ಕಾಂಗ್ರೆಸ್ ಮಾಜಿ ಮೇಯರ್ ಶರಣಕುಮಾರ್ ಮೋದಿ ಅವರು ಮಹಿಳಾ ಅಧಿಕಾರಿಗೆ ಕಿರುಕುಳ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಈ ಬಗ್ಗೆ ಕಲಬುರಗಿಯಲ್ಲಿ ಸ್ವತಃ ಎಫ್‌ಎಸ್‌ಓ ಅರ್ಚನಾ ಕಮಲಾಪುರಕರ್ ಸುದ್ದಿಗೋಷ್ಠಿ ನಡೆಸಿ ಗಂಭೀರ ಆರೋಪ ಮಾಡಿದ್ದಾರೆ.
ಚುನಾವಣೆ ಮುಂಚೆ ನಾನ್ ಐಎಸ್ಐ ವಾಟರ್ ಪ್ಲಾಂಟ್ಗಳನ್ನ (10 ಪ್ಲಾಂಟ್) ಸೀಜ್ ಮಾಡಿ ಕೇಸ್ ದಾಖಲು ಮಾಡಿದ್ದೇನೆ. ಚುನಾವಣೆಯ ಬಳಿಕವೂ 3 ನಾನ್ ಐಎಸ್ಐ ಘಟಕಗಳನ್ನ ಬಂದ್ ಮಾಡಿಸಿದ್ದೇನೆ. ಶಾಸಕರ ಆಪ್ತರು ನನ್ನ ಮೇಲೆ ದಬ್ಬಾಳಿಕೆ ಮಾಡಿ ಧಮ್ಕಿ ಹಾಕಿದ್ದಾರೆ ಎಂದು ಕಣ್ಣೀರು ಹಾಕಿದ್ದಾರೆ.
ಕಾಲ್ ಮಾಡಿ ಬೆದರಿಕೆ
ಇಲ್ಲಿ ಹೋಗಬೇಡಿ, ಅಲ್ಲಿ ಹೋಗಿ ಇದನ್ನ ಮಾಡಬೇಡಿ, ಅದನ್ನ ಮಾಡಿ ಅಂತ ಹೇಳ್ತಿದ್ದಾರೆ. ಕಾಲ್ ಮಾಡಿ ತೊಂದರೆ ಕೊಡೊದು ಅಲ್ಲದೇ ಆಫೀಸ್ಗೆ ಬಂದು ಹೆದರಿಸಿದ್ದಾರೆ. ನಾನು ಸೀಜ್ ಮಾಡಿರುವ ಘಟಕಗಳನ್ನ ಓಪನ್ ಮಾಡಿಸಿದ್ರು. ಅದಾದ ಬಳಿಕವೂ ನಾನು ಅದನ್ನ ಸೀಜ್ ಮಾಡಿಸಿದ್ದೇನೆ. ಜನರಿಗೆ ಒಳ್ಳೆಯ ಕುಡಿಯುವ ನೀರು ಕೊಡಬೇಕು ಅನ್ನೋ ಉದ್ದೇಶದಿಂದ ಸೀಜ್ ಮಾಡಿದ್ದಾರೆ ಎಂದು ಹೇಳಿದ್ದಾರೆ.
ನಿನ್ನೆ ಸಂಜೆ ಕೂಡ ಕಾಲ್ ಮಾಡಿ ಬೆದರಿಕೆ ಹಾಕಿದ್ದಾರೆ. ಕಲಬುರಗಿಯ ಹಳೆ ಆರ್ಟಿಓ ಕಚೇರಿಯಲ್ಲಿರುವ ಸಂಜೀವಿನ ವಾಟರ್ ಪ್ಲಾಂಟ್ ಬಂದ್ ಮಾಡಿಸೋದಕ್ಕೆ ಹೋದಾಗ ಬೆದರಿಕೆ ಹಾಕಿದ್ದಾರೆ ಎಂದು ಎಫ್‌ಎಸ್‌ಓ ಅರ್ಚನಾ ಕಮಲಾಪುರಕರ್ ಆರೋಪಿಸಿದ್ದಾರೆ.