Thursday, December 19, 2024

‘ಒಡೆಯ’ನಿಗೆ ಕಾಡ್ತಿದೆಯಾ ಒಂಟಿತನ? ಏನಿದು ದಚ್ಚು ಪೋಸ್ಟ್ ರಹಸ್ಯ?

ಬೆಂಗಳೂರು : ಚಾಲೆಂಜಿಂಗ್ ಸ್ಟಾರ್ ದರ್ಶನ್. ಕೋಟ್ಯಂತರ ಫ್ಯಾನ್ಸ್​ಗಳ ದಿಲ್ ಕದ್ದ ಒಡೆಯ. ದಚ್ಚು ಅಭಿಮಾನಿಗಳ ಪಡೆ ಬಹಳಾನೇ ದೊಡ್ಡದು. ಕೋಟಿಗಟ್ಟಲೇ ಫ್ಯಾನ್ಸ್ ಪಾಲಿಗೆ ಇವ್ರು ಪ್ರೀತಿಯ ಯಜಮಾನ. ಆದ್ರೆ, ಇಂಥಾ ಯಜಮಾನನಿಗೆ ಒಂಟಿತನ ಕಾಡ್ತಾ ಇದೆಯಾ? ಈ ಡೌಟ್ ಹುಟ್ಟಿಸಿದ್ದು ಡಿ ಬಾಸ್ ಹಾಕಿದ ಎರಡು ಪೋಸ್ಟ್!

ಹೌದು, ದಾಸ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಾಕಿದ ಆ ಎರಡು ಪೊಸ್ಟ್​ಗಳು ಈಗ ಬೇಜಾನ್ ಟಾಕ್ ಹುಟ್ಟುಹಾಕಿವೆ. ಸೋಮವಾರ ಬೆಳಗ್ಗೆ ಜೋಡೆತ್ತುಗಳ ಜೊತೆ ನಿಂತಿರುವ ಫೋಟೋವೊಂದನ್ನ ಪೋಸ್ಟ್ ಮಾಡಿ ‘ಕಾಲಾಯ ತಸ್ಮೈನಮಃ..‘ ಅಂತ ಬರೆದುಕೊಂಡಿದ್ರು.

ವಿಶೇಷ ಅಂದ್ರೆ ಒಂದು ದಿನದ ಹಿಂದೆ ಸುಮಲತಾ ಅಂಬರೀಶ್ ಬರ್ತ್ ಡೇ ಪಾರ್ಟಿಯಲ್ಲಿ ಕಿಚ್ಚ ಸುದೀಪ್ ಜೊತೆಗೆ ದರ್ಶನ್ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ರು. 6 ವರ್ಷಗಳಿಂದ ದೂರ ದೂರ ಆಗಿದ್ದ ಈ ಕುಚಿಕುಗಳ ಸಮಾಗಮ ಕಂಡು ಎಲ್ಲರೂ ಖುಷಿ ಪಟ್ಟಿದ್ರು.

ದಿಗ್ಗಜರು 2.0 ಸಿನಿಮಾ ಮಾಡ್ತಾರಾ?

ಕಿಚ್ಚ-ದಚ್ಚು ಮುನಿಸು ಮರೆತು ಒಂದಾಗ್ತಾ ಇದ್ದಾರೆ. ಮುಂದೆ ಒಟ್ಟಿಗೆ ಸಿನಿಮಾ ಕೂಡ ಮಾಡಲಿದ್ದಾರೆ. ಈ ಇಬ್ಬರನ್ನ ಜೊತೆಗಿಟ್ಟುಕೊಂಡು ರಾಕ್ಲೈನ್ ವೆಂಕಟೇಶ್ ದಿಗ್ಗಜರು 2.0 ಸಿನಿಮಾ ಮಾಡ್ತಾರೆ ಅಂತಲೂ ಸುದ್ದಿಯಾಗಿತ್ತು. ಇದರ ಬೆನ್ನಲ್ಲೇ ದರ್ಶನ್ ಜೋಡೆತ್ತಿನ ಫೊಟೋ ಹಾಕಿ ಈ ಪೋಸ್ಟ್ ಹಾಕಿದ್ರಿಂದ ಇದಕ್ಕೆ ವಿಶೇಷ ಅರ್ಥ ಬಂತು.

ದಚ್ಚು ಬಾಯಲ್ಲಿ ಕ್ರೇಜಿ’ ಸಾಲು

ಆದ್ರೆ, ಇದರ ಬೆನ್ನಲ್ಲೇ ರಾತ್ರಿ ದರ್ಶನ್ ಮತ್ತೊಂದು ಪೋಸ್ಟ್ ಮಾಡಿದ್ರು. ‘ಬಿ ಅಲೋನ್ ಟು ಬಿ ಹ್ಯಾಪಿ.. ಬಿ ಹ್ಯಾಪಿ ಟು ಬಿ ಅಲೋನ್ ಅಂತ..’ ಇದು ರವಿಚಂದ್ರನ್​ ಅವರ ಏಕಾಂಗಿ ಸಿನಿಮಾದ ಹಾಡಿನ ಸಾಲು. ನಾನು ಏಕಾಂಗಿಯಾಗೇ ಇರಲು ಸಂತೋಷ ಪಡ್ತಿನಿ ಅಂತ ಸಾರುವ ಹಾಡಿದು. ಬಹುಶಃ ತಮ್ಮ ಮತ್ತು ಸುದೀಪ್ ನಂಟಿನ ಬಗ್ಗೆ ಫ್ಯಾನ್ಸ್​ ವಿಶೇಷ ಅರ್ಥ ಕಲ್ಪಿಸ್ತಾ ಇರೋದನ್ನ ನಿರಾಕರಿಸಲಿಕ್ಕೆ ದರ್ಶನ್ ಈ ಪೋಸ್ಟ್ ಹಾಕಿದ್ರಾ ಗೊತ್ತಿಲ್ಲ.

ಒಟ್ನಲ್ಲಿ, ಒಂದೇ ದಿನ ದರ್ಶನ್ ಮಾಡಿದ ಈ ಪೋಸ್ಟ್​ಗಳು ಸಾಕಷ್ಟು ಚರ್ಚೆ ಹುಟ್ಟಿಹಾಕಿದ್ವು. ಡಿ ಬಾಸ್ ಯಾಕೆ ಏಕಾಂಗಿ ಸಿನಿಮಾದ ಹಾಡು ಗುನುಗಿಕೊಳ್ತಿದ್ದಾರೆ ಅನ್ನೋದು ಫ್ಯಾನ್ಸ್​ಗಳನ್ನ ಕಾಡ್ತಿದೆ. ದಾಸನಿಗೆ ಒಂಟಿತನ ಕಾಡ್ತಿದೆಯಾ? ಕೋಟ್ಯಂತರ ಫ್ಯಾನ್ಸ್​ಗಳ ದಿಲ್ ಕದ್ದ ಒಡೆಯನಿಗೆ ಏಕಾಂಗಿ ಅನ್ನೋ ಭಾವನೆ ಬರ್ತಿದೆಯಾ ಗೊತ್ತಿಲ್ಲ. ಈ ಸೂಪರ್ ಸ್ಟಾರ್​ಗಳ ಮನಸ್ಸಲ್ಲಿ ಏನಿದೆ ಅನ್ನೋದು ದೊಡ್ಡ ಸೀಕ್ರೆಟ್!

RELATED ARTICLES

Related Articles

TRENDING ARTICLES