Monday, December 23, 2024

ಸೆ.3ರಂದು ವಿಶ್ವ ಕಪ್​ಗೆ ಭಾರತ ತಂಡ ಪ್ರಕಟ

ಬೆಂಗಳೂರು : ಭಾರತ ಕ್ರಿಕೆಟ್ ತಂಡ ಸದ್ಯ ಏಷ್ಯಾಕಪ್ 2023ಕ್ಕಾಗಿ ಭರ್ಜರಿ ತಯಾರಿ ನಡೆಸುತ್ತಿದೆ. ಆಗಸ್ಟ್ 30 ರಂದು ಈ ಮಹತ್ವದ ಟೂರ್ನಿಗೆ ಚಾಲನೆ ಸಿಗಲಿದೆ.

ಟೀಂ ಇಂಡಿಯಾ ಸೆಪ್ಟೆಂಬರ್ 2 ರಂದು ಪಾಕಿಸ್ತಾನ ವಿರುದ್ಧ ಆಡುವ ಮೂಲಕ ಅಭಿಯಾನ ಆರಂಭಿಸಲಿದೆ. ಏಷ್ಯಾಕಪ್ ಬಳಿಕ ಮತ್ತೊಂದು ಮಹತ್ವದ ಟೂರ್ನಿ ವಿಶ್ವಕಪ್​ನಲ್ಲಿ ಭಾರತ ಕಣಕ್ಕಿಳಿಯಲಿದೆ. ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ಈಗಾಗಲೇ ಹೆಚ್ಚಿನ ತಂಡಗಳು ಪ್ರಕಟ ಆಗಿದೆ. ತಂಡವನ್ನು ಹೆಸರಿಸಲು ಕೊನೆಯ ದಿನಾಂಕ ಸೆಪ್ಟೆಂಬರ್ 5 ಆಗಿದೆ. ಬಳಿಕ ಸೆಪ್ಟೆಂಬರ್ 27 ಒಳಗೆ ಬೇಕಾದಲ್ಲಿ ತಮ್ಮ ತಂಡದಲ್ಲಿ ಬದಲಾವಣೆಗಳನ್ನು ಮಾಡಬಹುದು.

ವಿಶ್ವಕಪ್​ಗೆ ಟೀಂ ಇಂಡಿಯಾ ಇನ್ನಷ್ಟೆ ಪ್ರಕಟವಾಗಬೇಕಿದೆ. ಇದೀಗ ಏಕದಿನ ವಿಶ್ವಕಪ್ ಟೂರ್ನಿಗೆ ಸೆಪ್ಟೆಂಬರ್ 3 ರಂದು ಭಾರತ ತಂಡವನ್ನು ಪ್ರಕಟಿಸುವ ಸಾಧ್ಯತೆಯಿದೆ. ತಂಡ ಹೆಸರಿಸಲು ಕೊನೆಯ ಎರಡು ದಿನ ಇರುವಾಗ ಬಿಸಿಸಿಐ ಪ್ರಕಟಿಸಲಿದೆ. ವಿಶೇಷ ಎಂದರೆ ಏಷ್ಯಾಕಪ್​ನಲ್ಲಿ ಇಂಡೋ-ಪಾಕ್ ಸೆ.2 ರಂದು ಮುಖಾಮುಖಿ ಆಗಲಿದೆ. ಈ ಪಂದ್ಯ ಮುಗಿದ ಮುಂದಿನ ದಿನ ವಿಶ್ವಕಪ್​ಗೆ ತಂಡ ಆಯ್ಕೆ ಆಗಲಿದೆ.

RELATED ARTICLES

Related Articles

TRENDING ARTICLES