Monday, December 23, 2024

ಮದುವೆ ಊಟ ಸೇವಿಸಿ 80 ಮಂದಿಗೆ ವಾಂತಿ ಭೇದಿ

ಚಿತ್ರದುರ್ಗ : ಮದುವೆ ಸಮಾರಂಭದಲ್ಲಿ ಊಟ ಸೇವಿಸಿ ಮನೆಗೆ ವಾಪಸ್ ಆದ ಜನರಿಗೆ ವಾಂತಿ ಭೇದಿಯಾಗಿ ಅಸ್ವಸ್ಥಗೊಂಡ ಜನರು ಘಟನೆ ಜಿಲ್ಲೆಯ ಹಿರೇಕೋಡಿ ಗ್ರಾಮದಲ್ಲಿ ನಡೆದಿದೆ.

ನಿನ್ನೆ ಗ್ರಾಮದ ಪಟೇಲ್ ಎಂಬುವರ ಕುಟುಂಬದ ಮದುವೆ ಸಮಾರಂಭ ನಡೆದಿತ್ತು. ಕಾರ್ಯಕ್ರಮದಲ್ಲಿ 500 ಕ್ಕೂ ಹೆಚ್ಚು ಜನರು ಭಾಗಿಯಾಗಿದ್ದು, ಮಹಾರಾಷ್ಟ್ರದ ಮಿರಜ್​ನಿಂದಲೂ ಮದುವೆಗೆ ಆಗಮಿಸಿದ್ದ ಸಂಬಂಧಿಕರು. ಈ ವೇಳೆ ಕಾರ್ಯಕ್ರಮದಲ್ಲಿ ಊಟವನ್ನು ಸೇವಿಸಿದ ಜನರು ಮನೆಗೆ ವಾಪಸಾದ ಬಳಿಕ ಪುಡ್ ಪಾಯಿಸನ್ ಆಗಿ ವಾಂತಿ ಭೇದಿ ಶುರುವಾಗಿದೆ.

ಇದನ್ನು ಓದಿ : ಚಂದ್ರಯಾನ ಚಂದ್ರನ ಮುಟ್ಟಿತು, ಆದ್ರೂ ವಿಪಕ್ಷ ನಾಯಕನ ಆಯ್ಕೆ ಆಗ್ತಿಲ್ಲ : ಪ್ರಿಯಾಂಕ್ ಖರ್ಗೆ

ಮದುವೆ ಸಮಾರಂಭದಲ್ಲಿ ಊಟ ಮಾಡಿ 80 ಕ್ಕೂ ಹೆಚ್ಚು ಜನರಿಗೆ ವಾಂತಿ ಭೇದಿ ಶುರುವಾಗಿತ್ತು. ರಾತ್ರಿ ವೇಳೆ ವಾಂತಿ ಭೇದಿಯಿಂದ ಬಳಲಿದ ಜನರು ಸುತ್ತಮುತ್ತಲಿನ ಹತ್ತಕ್ಕೂ ಹೆಚ್ಚು ವಿವಿಧ ಖಾಸಗಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದಾರೆ. ಬಳಿಕ ಸುದ್ದಿ ತಿಳಿಯುತ್ತಿದ್ದಂತೆ ಹಿರೇಕೋಡಿ ಗ್ರಾಮಕ್ಕೆ ದೌಡಾಯಿಸಿದ ಆರೋಗ್ಯ ಇಲಾಖೆ.

ತಕ್ಷಣ ವಾಂತಿ ಭೇದಿಯಿಂದ ನರಳುತ್ತಿದ್ದವರ ಮನೆ ಮನೆಗೆ ತೆರಳಿ ಜನರ ಆರೋಗ್ಯ ತಪಾಸಣೆ ನಡೆಸಲಾಯಿತು. ಇನ್ನು ಕಾರ್ಯಕ್ರಮಕ್ಕೆ ಬಂದಿದ್ದ ಮಿರಜ್​ನಿಂದ ಆಗಮಿಸಿದವರಿಗೂ ವಾಂತಿ ಭೇದಿ ಕಾಣಿಸಿಕೊಂಡಿರುವ ಮಾಹಿತಿ ಕೂಡ ದೊರಕಿದೆ.

RELATED ARTICLES

Related Articles

TRENDING ARTICLES