Wednesday, January 22, 2025

ಶುಂಠಿಗೆ ಕಳೆನಾಶಕ ಸಿಂಪಡನೆ ಮಾಡಿದ್ದ ಯುವಕ ಸಾವು

ಹಾಸನ : ಕಳೆನಾಶಕ ಸಿಂಪಡಣೆ ವೇಳೆ ಮುಂಜಾಗ್ರತೆ ಕ್ರಮವಹಿಸದ ಹಿನ್ನೆಲೆ ಯುವಕನ ದೇಹವನ್ನು ಸೇರಿ ಪ್ರಾಣವನ್ನೇ ತೆಗೆದ ಕಳೆನಾಶಕ ಘಟನೆ ತಾಲೂಕಿನ ಕಾರ್ಲೆ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಕೀರ್ತಿ (23) ಮೃತ ಯುವಕ. ತನ್ನ ಜಮೀನಿನಲ್ಲಿ ಬೆಳೆದಿದ್ದ ಶುಂಠಿ ಬೆಳೆಯಲ್ಲಿ ಕಳೆ ಬೆಳೆದಿದ್ದರಿಂದ ಸತತವಾಗಿ ಒಂದು ವಾರದಿಂದಲೂ ಕಳೆ ನಾಶಕ ಸಿಂಪಡಣೆಯನ್ನು ಮಾಡಿದ್ದನು. ಈ ವೇಳೆ ವಾಂತಿ ಮತ್ತು ಸುಸ್ತಿನಿಂದ ಬಳಲಿ ಆಸ್ಪತ್ರೆಗೆ ದಾಖಲಾಗಿದ್ದ ಕೀರ್ತಿ.

ಇದನ್ನು ಓದಿ : ಸಚಿವರು ಕಾಲ್ ಪಿಕ್ ಮಾಡ್ತಿಲ್ಲ : ಕಾಂಗ್ರೆಸ್ ಶಾಸಕ ಶಿವಗಂಗಾ ಅಳಲು

ವೈದ್ಯರು ರಕ್ತ ಪರೀಕ್ಷೆ ನಡೆಸಿದಾಗ ದೇಹದಲ್ಲಿ ವಿಷ ಇರುವುದು ದೃಢವಾಗಿತ್ತು. ಬಳಿಕ ಕಳೆ ನಾಶಕ ಔಷಧಿ ದೇಹದ ಒಳಗಡೆ ಸೇರಿ ಯುವಕನ ಕಿಡ್ನಿ, ಲೀವರ್ ಹಾಗೂ ಶ್ವಾಸಕೋಶವನ್ನು ನಿಷ್ಕ್ರಿಯಗೊಳಿಸಿತ್ತು. ಅದರಿಂದ ನಿನ್ನೆ ಬಹುಅಂಗಾಂಗ ವೈಫಲ್ಯದ ಹಿನ್ನೆಲೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಹಾಸನ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ದುರ್ಘಟನೆ ನಡೆದಿದೆ.

RELATED ARTICLES

Related Articles

TRENDING ARTICLES