Saturday, January 18, 2025

ರೈಲಿನ ಅಡಿ ಸಿಲುಕಿದ್ರೂ ಸಾವನ್ನೇ ಗೆದ್ದ ಧೀರೆ!

ಬೆಂಗಳೂರು : ರೈಲಿನ ಕೆಳಗೆ ಸಿಲುಕಿದ್ದ ಮಹಿಳೆ ಪವಾಡ ಸದೃಶವಾಗಿ ಬಚಾವ್ ಆಗಿರುವ ಘಟನೆ ಬೆಂಗಳೂರಿನ ರಾಜಾನುಕುಂಟೆ ರೈಲ್ವೆ ನಿಲ್ದಾಣದಲ್ಲಿ ಜರುಗಿದೆ.

ಗೂಡ್ಸ್ ರೈಲು ಹಳಿ ದಾಟುವ ವೇಳೆ ಈ ಅವಘಡ ಸಂಭವಿಸಿದೆ. ಅದ್ದಿಗಾನಹಳ್ಳಿಯಿಂದ ರಾಜಾನುಕುಂಟೆಗೆ ಬರಲು ಇರುವ ಏಕೈಕ ಮಾರ್ಗ Three way track ಹೊಂದಿರುವ Busiest Track ಇದಾಗಿದ್ದು, ರೈಲಿನ ಕೆಳಗೆ ನುಗ್ಗಿ ಸಂಚರಿಸುವ ಪರಿಸ್ಥಿತಿ ಉದ್ಭವಿಸಿದೆ.

ಮಹಿಳೆಯೊಬ್ಬರು ರೈಲಿನ ಕೆಳಗಿಂದ ಹಳಿ ದಾಟಲು ಮುಂದಾದಾಗ ರೈಲು ಹೊರಟಿದೆ. ಗಾಬರಿಗೊಂಡ ಮಹಿಳೆ ಕೂಡಲೇ ರೈಲಿನ ಕೆಳಗೆ ಮಹಿಳೆ ಮಲಗಿದ್ದಾರೆ. ಕಣ್ಣು , ಕಿವಿ ಎರಡೂ ಮುಚ್ಚಿ ಮಹಿಳೆ ಮಲಗಿದ್ದಾಳೆ. ಅದೃಷ್ಟವಷಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

RELATED ARTICLES

Related Articles

TRENDING ARTICLES