Sunday, December 22, 2024

ಇಸ್ರೋ ಸೂರ್ಯ ಶಿಕಾರಿಗೆ ಮುಹೂರ್ತ ಫಿಕ್ಸ್ : ಸೆ.2ರಂದು ಆದಿತ್ಯ-L1 ಉಡಾವಣೆ

ಬೆಂಗಳೂರು : ಚಂದ್ರಯಾನ 3 ಯಶಸ್ಸಿನ ಬಳಿಕ ಇದೀಗ ಇಸ್ರೋ, ಸೂರ್ಯನನ್ನು ಅಧ್ಯಯನ ಮಾಡಲು ಸೆಪ್ಟೆಂಬರ್ 2ರಂದು ಆದಿತ್ಯ-L1 ಮಿಷನ್‌ನ ಉಡಾವಣೆಗೆ ಸಿದ್ಧವಾಗಿದೆ.

ಈ ಕುರಿತು ಟ್ವೀಟ್ ಮಾಡಿರುವ ಇಸ್ರೋ ವಿಜ್ಞಾನಿಗಳು, ಸೆಪ್ಟೆಂಬರ್ 2ರಂದು ಬೆಳಗ್ಗೆ 11.50ಕ್ಕೆ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಇನ್ನು, ಈ ಪ್ರಯೋಗ ವೀಕ್ಷಿಸಲು ನಾಗರಿಕರನ್ನು ಆಹ್ವಾನಿಸಲಾಗಿದೆ. ಇದಕ್ಕಾಗಿ ನೀವು https://Ivg.shar .gov.in/VSCREGISTRATION/index.jspe ನೋಂದಣಿ ಮಾಡಿಕೊಳ್ಳಬೇಕು.

ಚಂದ್ರನ ಮೇಲೆ ವಿಕ್ರಮ್‌ ಲ್ಯಾಂಡರ್‌ಅನ್ನು ಯಶಸ್ವಿಯಾಗಿ ಸಾಫ್ಟ್‌ ಲ್ಯಾಂಡಿಂಗ್‌ ಮಾಡುವ ಮೂಲಕ ಇಸ್ರೋ ವಿಶ್ವದ ಗಮನವನ್ನು ತನ್ನತ್ತ ಸೆಳೆದಿದೆ. ಇದೀಗ, ಅಧಿಕೃತವಾಗಿ ತನ್ನ ಮುಂದಿನ ಮಿಷನ್‌ನ ಯೋಜನೆಯನ್ನು ಪ್ರಕಟಿಸಿದೆ.

RELATED ARTICLES

Related Articles

TRENDING ARTICLES