Monday, February 24, 2025

ಅಣ್ಣಾ.. ಐದು ವರ್ಷ ನೀನೇ ಸಿಎಂ, ನಿನಗೆ ಯಾರು ಸಾಟಿ ಇಲ್ಲ : ಸಿದ್ದರಾಮಯ್ಯ ಫ್ಯಾನ್ಸ್ ಜೈಕಾರ

ಮೈಸೂರು : ಕೆಡಿಪಿ ಸಭೆ ಮುಗಿಸಿ ಸಿಎಂ ಹೊರಬರುತ್ತಿದಂತೆ ಅಣ್ಣಾ.. ಐದು ವರ್ಷ ನೀನೇ ಸಿಎಂ ಎಂದು ಸಿದ್ದರಾಮಯ್ಯ ಅಭಿಮಾನಿಗಳು ಘೋಷಣೆ ಕೂಗಿದ್ದಾರೆ.

ಜಿಲ್ಲಾ ಪಂಚಾಯತ್ ಸಭಾಂಗಣದ ಹೊರಭಾಗದಲ್ಲಿ ಜಮಾಯಿಸಿದ ಅಭಿಮಾನಿಗಳು, ನಿನಗೆ ಯಾರು ಸಾಟಿ ಇಲ್ಲ. ಜನಗಳ ಅಭಿಮತಗಳಿಂದ ಆಯ್ಕೆಯಾಗಿರುವ ಸಿಎಂ ನೀವು. ಜನಪ್ರಿಯ ಸಿಎಂ ಸಿದ್ದರಾಮಯ್ಯಗೆ ಜೈ ಎಂದು ಜೈಕಾರ ಹಾಕಿದ್ದಾರೆ. ಇದಕ್ಕೆ ಚಿತ್ರದುರ್ಗ ಕಾಂಗ್ರೆಸ್ ಜಿಲ್ಲಾಧ್ಯಕ್ಷರು ಧ್ವನಿಗೂಡಿಸಿದ್ದಾರೆ.

ಐದು ಸಾವಿರ ಕ್ಯೂಸೆಕ್ಸ್ ಕಾವೇರಿ ನೀರು ಬಿಡುಗಡೆ ವಿಚಾರವಾಗಿ ಮಾತನಾಡಿದ ಸಿದ್ದರಾಮಯ್ಯ ಅವರು, ಕಾವೇರಿ ನೀರು ಹಂಚಿಕೆ ಪ್ರಾಧಿಕಾರ ಸಭೆ ನಡೆಸಿದ್ದಾರೆ. 15 ದಿನಗಳವರಗೆ ನೀರು ಹರಿಸುವಂತೆ ಮೊದಲು ಹೇಳಿದ್ದರು. ಹಿಂದಿನ ಸಭೆಯಲ್ಲಿ 10 ಸಾವಿರ ಬಿಡುವಂತೆ ತಿಳಿಸಿದ್ದರು. ಆ.31 ರವರಗೆ 86 ಟಿಎಂಸಿ ನೀರು ನೀಡಬೇಕಿತ್ತು. ಈವರಗೆ 30 ಟಿಎಂಸಿ ಮಾತ್ರ ನೀಡಿದ್ದೇವೆ ಎಂದರು.

ಸಂಕಷ್ಟ ಸೂತ್ರಕ್ಕೆ ಪ್ರಯತ್ನ

ಪ್ರತಿದಿನ 24 ಸಾವಿರ ಕ್ಯೂಸೆಕ್ಸ್ ನೀರು ನೀಡುವಂತೆ ವಾದಿಸಿದ್ದಾರೆ. ನಾವು ಕೊಡಲು ಸಾಧ್ಯವಿಲ್ಲ ಎಂದು ವಾದಿಸಿದ್ದೇವೆ. ನಾವು ಲೀಗಲ್ ಟೀಂ ಜೊತೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ. ನೀರಾವರಿ ಇಲಾಖೆ ಜೊತೆ ಮಾತನಾಡಿ ತೀರ್ಮಾನ ಕೈಗೊಳ್ಳಲಾಗುವುದು. ಸಂಕಷ್ಟ ಸೂತ್ರ ಅನುಸರಿಸಲು ನಾವು ಪ್ರಯತ್ನಿಸುತ್ತಿದ್ದೇವೆ ಎಂದು ಹೇಳಿದರು.

ಪದೇ ಪದೆ ಪ್ರಶ್ನೆ ಏಕೆ ಅಂತ ಗರಂ

ನಮ್ಮ ಬಳಿಯೇ ಸೂಕ್ತ ಪ್ರಮಾಣದ ನೀರಿಲ್ಲ. ಬೆಳಗಳ ಪರಿಸ್ಥಿತಿ ನೋಡಿಕೊಳ್ಳಬೇಕಾಗಿದೆ. ಸಂಬಂಧಪಟ್ಟ ಸಚಿವರ ಜೊತೆ ಚರ್ಚಿಸುವೆ. ಡಿಸಿಎಂ ಡಿಕೆಶಿ ಜೊತೆ ಮಾತನಾಡುವೆ. ನಾವು ಕೋರ್ಟ್ ನಲ್ಲಿ ಅಪ್ಲಿಕೇಷನ್ ಹಾಕಬೇಕಾ? ಮುಂದಿನ ಸಾಧಕ-ಬಾಧಕ ಕುರಿತು ಪರಿಶೀಲಿಸುವೆ. ಚರ್ಚಿಸಿ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ. ಈ ಕುರಿತು ಮಾತನಾಡುವೆ ಎಂದ ಮೇಲೆ ಪದೇ ಪದೆ ಪ್ರಶ್ನೆ ಏಕೆ ಎಂದು ಗರಂ ಆದರು.

RELATED ARTICLES

Related Articles

TRENDING ARTICLES