ಹುಬ್ಬಳ್ಳಿ : ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರ ಪಕ್ಷ ನಿಷ್ಠೆ ಹೇಳಿಕೆ ವಿಚಾರವಾಗಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಪಕ್ಷ ನಿಷ್ಠೆ ಜಗದೀಶ್ ಶೆಟ್ಟರ್ಗೆ ಇಲ್ಲ ಅಂತ ಹೇಳಿನಾ? ಎಂದು ಜೋಶಿಗೆ ತಿರುಗೇಟು ಕೊಟ್ಟಿದ್ದಾರೆ.
ಸುಕುಮಾರ್, ರಾಮದಾಸ್ ಅವರಿಗೆ ಪಕ್ಷಕ್ಕೆ ನಿಷ್ಠೆ ಇರಲಿಲ್ವಾ? ಪಕ್ಷಕ್ಕೆ ನಿಷ್ಠೆ ಅಂತ ಹೇಳಲಿಕ್ಕೆ ನಿಮಗೇನು ಅರ್ಹತೆ ಇದೆ? ಪಕ್ಷಕ್ಕಾಗಿ ಕೆಲಸ ಮಾಡಿದವರನ್ನೆಲ್ಲಾ ಹೊರಗೆ ಹಾಕ್ತಾ ಇದ್ದಾರೆ ಇವರು. ಜೋಶಿ ಆಗಲಿ, ಯಾರಿಗೂ ಅರ್ಹತೆ ಇಲ್ಲ ಎಂದು ಕುಟುಕಿದ್ದಾರೆ.
ರಾಜ್ಯದಲ್ಲಿ ಬಿಜೆಪಿಗೆ ಅಸ್ತಿತ್ವದ ಪ್ರಶ್ನೆ ಬರ್ತಾ ಇದೆ. ಒಟ್ಟಾರೆ ಬಿಜೆಪಿಯಿಂದ ಬಂದೆ ಬರ್ತಾರೆ. ಬಿಜೆಪಿ ಗ್ರೌಂಡ್ ಲೆವೆಲ್ ಕಾರ್ಯಕರ್ತರು ನನಗೆ ಕರೆ ಮಾಡಿ ಕೇಳ್ತಾರೆ. ಇದನ್ನೆಲ್ಲಾ ಸಮಯ ಬಂದಾಗ ತಿಳಿಸ್ತೀನಿ. ಯಾರಿಗೂ ಪಕ್ಷ ಬಿಟ್ಟು ಬನ್ನಿ ಅಂದಿಲ್ಲ. ಅವರಗಲೇ ನನಗೆ ಈಗಾಗಲೇ ಕರೆ ಮಾಡ್ತಾ ಇದ್ದಾರೆ ಎಂದು ಜಗದೀಶ್ ಶೆಟ್ಟರ್ ಹೊಸ ಬಾಂಬ್ ಸಿಡಿಸಿದ್ದಾರೆ.
15 ಸೀಟ್ ಕಾಂಗ್ರೆಸ್ ಬರುತ್ತೆ
ಉಡುಪಿಯಲ್ಲಿ ಸುದ್ದಿ ಹಬ್ಬಿಸಿಬಿಟ್ರು. ಅಮಿತ್ ಶಾ ಅವರು ನನಗೆ ಕಾಲ್ ಮಾಡಿದ್ದಾರೆ ಅಂತ ಸುಳ್ಳು ಸುದ್ದಿ ಹಬ್ಬಿಸಿದ್ದರು. ರಾಜಕೀಯ ಗಮನ ಬೇರೆ ಕಡೆ ಸೆಳೆಯಲು ಈ ರೀತಿ ಮಾಡಿದ್ರು. ಲೋಕಸಭಾ ಚುನಾವಣೆಯಲ್ಲಿ ಮಿನಿಮಮ್ 15 ಸೀಟ್ ಕಾಂಗ್ರೆಸ್ ಬರುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.