Thursday, July 4, 2024

ಕಾವೇರಿ ವಿವಾದ : 15 ದಿನಗಳ ಕಾಲ ನೀರು ಬಿಡುವಂತೆ ಶಿಫಾರಸ್ಸು

ಬೆಂಗಳೂರು : ಕಾವೇರಿ ನದಿ ನೀರು ವಿವಾದ ಸಂಬಂಧ ಇಂದು ನಡೆದ ಸಭೆಯಲ್ಲಿ ಕರ್ನಾಟಕಕ್ಕೆ ಭಾರಿ ಹಿನ್ನಡೆಯಾಗಿದೆ.

ನವದೆಹಲಿಯಲ್ಲಿ ನಡೆದ ಕಾವೇರಿ ನೀರು ನಿರ್ವಾಹಣಾ ಪ್ರಾಧಿಕಾರದ ಸಭೆ ಮುಕ್ತಾಯವಾಗಿದ್ದು, ದಿನಕ್ಕೆ 5,000 ಕ್ಯೂಸೆಸ್ ನಂತೆ ಮುಂದಿನ 15 ದಿನಗಳ ಕಾಲ ಕಾವೇರಿ ನೀರು ಹರಿಸುವಂತೆ ಶಿಫಾರಸ್ಸು ನೀಡಿದೆ.

ಇದರೊಂದಿಗೆ ಪ್ರಾಧಿಕಾರದ ಸಭೆಯಲ್ಲಿ ತಮಿಳುನಾಡು ಸರ್ಕಾರಕ್ಕೆ ಗೆಲುವಾಗಿದೆ. ಮಳೆ ಇಲ್ಲದ ಕಾರಣ ನೀರು ಹರಿಸಲು ಸಾಧ್ಯವಿಲ್ಲ ಎಂದು ವಾದ ಮಂಡಿಸಿದ ಕರ್ನಾಟಕ ಸರ್ಕಾರಕ್ಕೆ ಹಿನ್ನಡೆಯಾಗಿದೆ. ಇನ್ನೂ ಕಾವೇರಿ ವಿವಾದ ಸಂಬಂಧ ತಮಿಳುನಾಡು ಸರ್ಕಾರ ಸುಪ್ರೀ ಕೋರ್ಟ್ ಮೆಟ್ಟಿಲೇರಿದೆ. ಸೆಪ್ಟಂಬರ್ 1ರಂದು ವಿಚಾರಣೆ ನಡೆಯಲಿದೆ.

ನಾಳೆ ಅಧಿಕೃತವಾಗಿ ನಿರ್ಧಾರ

ನಾಳೆ ನಡೆಯಲಿರುವ CWMA ಸಭೆಯಲ್ಲಿ ಅಂತಿಮ ನಿರ್ಧಾರ ಆಗಲಿದೆ. ಕರ್ನಾಟಕದ ಇಂಜಿನಿಯರ್ ಕೊಟ್ಟಿರುವ ಮಾಹಿತಿ ಅನ್ವಯ CWRC ಈ ನಿರ್ಧಾರಕ್ಕೆ ಬಂದಿದೆ. ನಾಳೆಯ ಸಭೆಯಲ್ಲಿ ರಾಜ್ಯದ ಜಲ ಸಂಪನ್ಮೂಲ ಇಲಾಖೆಯ ಕಾರ್ಯದರ್ಶಿ ಭಾಗಿಯಾಗಲಿದ್ದಾರೆ. ಎಷ್ಟು ಕ್ಯೂಸೆಕ್ ನೀರು ಬಿಡಬೇಕು ಎಂದು ನಾಳೆ ಅಧಿಕೃತವಾಗಿ ನಿರ್ಧಾರ ಆಗಲಿದೆ. ನಾಳಿನ ಸಭೆಯಲ್ಲಿ ಸೂಚನೆ ಅಥವಾ ಆದೇಶ ನೀಡಿದ್ರೆ ಆಗ ನೀರು ಹರಿಸಬೇಕಾಗುತ್ತದೆ.

ಕಾವೇರಿ ವಿಚಾರದಲ್ಲಿ ರಾಜಕೀಯ

ಕಾವೇರಿ ನೀರು ವಿಚಾರದಲ್ಲಿ ಕಾಂಗ್ರೆಸ್​ ಸರ್ಕಾರ ಹುಡುಗಾಟಿಕೆ ಬಿಡಬೇಕು. ಕಾವೇರಿ ವಿಚಾರದಲ್ಲಿ ರಾಜಕೀಯ ಮಾಡಿಲ್ಲ. ವಾಟರ್ ಮ್ಯಾನೆಜ್‌ಮೆಂಟ್‌ ಬೋರ್ಡ್ ನವರು ಬೀಡಿ ಅಂತ ತಕ್ಷಣ ಕಾಂಗ್ರೆಸ್​ ಸರ್ಕಾರ ಬಿಡುಗಡೆ ಮಾಡಿದ್ದಾರೆ. ಪ್ರತಿಭಟನೆ ಮಾಡಬೇಕಿತ್ತು, ನೀರು ಬಿಡಬಾರದಿತ್ತು ಎಂದು ಮಾಜಿ ಮುಖ್ಯಮಂತ್ರಿ ಹೆಚ್​.ಡಿ ಕುಮಾರಸ್ವಾಮಿ ಬೇಸರ ಹೊರಹಾಕಿದ್ದಾರೆ.

RELATED ARTICLES

Related Articles

TRENDING ARTICLES