Monday, December 23, 2024

ರೈತರಿಗೆ 6ನೇ ಗ್ಯಾರಂಟಿ ಕೊಡಿ : ಕುಮಾರಸ್ವಾಮಿ ಆಗ್ರಹ

ಮಂಡ್ಯ : ಕಾವೇರಿ ನೀರು ವಿಚಾರದಲ್ಲಿ ಕಾಂಗ್ರೆಸ್​ ಸರ್ಕಾರ ಹುಡುಗಾಟಿಕೆ ಬಿಡಬೇಕು. ನಿಮ್ಮ ಗ್ಯಾರಂಟಿ ಜೊತೆಗೆ ರೈತರಿಗೆ 6ನೇ ಗ್ಯಾರಂಟಿ ಕೊಡಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ರೈತರಿಗೆ ಬೆಳೆ ಬೆಳೆಯ ಬೇಡಿ, ನಾವೇ ಪರಿಹಾರ ಕೊಡ್ತೇವೆ ಅಂತ ಘೋಷಣೆ ಮಾಡಿ ಎಂದು ಕುಟುಕಿದ್ದಾರೆ.

ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ವಿಚಾರವಾಗಿ ಮಾತನಾಡಿ, ಕಾವೇರಿ ವಿಚಾರದಲ್ಲಿ ರಾಜಕೀಯ ಮಾಡಿಲ್ಲ. ವಾಟರ್ ಮ್ಯಾನೆಜ್‌ಮೆಂಟ್‌ ಬೋರ್ಡ್ ನವರು ಬೀಡಿ ಅಂತ ತಕ್ಷಣ ಸರ್ಕಾರ ಬಿಡುಗಡೆ ಮಾಡಿದ್ದಾರೆ. ಪ್ರತಿಭಟನೆ ಮಾಡಬೇಕಿತ್ತು, ನೀರು ಬಿಡಬಾರದಿತ್ತು ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ನಾವು ಬೆಂಬಲ ಕೊಡ್ತಿವಿ

ತಮಿಳುನಾಡಿನವರು ಸುಪ್ರೀಂ ಕೋರ್ಟ್​ಗೆ ಅರ್ಜಿ ಹಾಕಿದ್ದಾರೆ. ಅರ್ಜಿ ವಿರುದ್ಧ ನಾವು ಸುಪ್ರೀಂ ಕೋರ್ಟ್ ಮುಂದೆ ಹೋಗಬೇಕಿತ್ತು. ನಂತರ ಸುಪ್ರೀಂ ಕೋರ್ಟ್ ತಿರ್ಮಾನಕ್ಕೆ ನಾವು ಬದ್ದರಾಗಬೇಕಿತ್ತು. ಸರ್ವ ಪಕ್ಷಗಳ ಸಭೆ ಕರೆದರು ಚರ್ಚೆಯಾಗಬೇಕಿತ್ತು. ಜನ ಹಿತರಕ್ಷಣೆಗೆ ಒಳ್ಳೆಯ ಕೆಲಸ ಮಾಡಿ ನಾವು ಬೆಂಬಲ ಕೊಡ್ತಿವಿ ಅಂತ ಹೇಳಿದ್ದಿನಿ ಎಂದು ತಿಳಿಸಿದ್ದಾರೆ.

RELATED ARTICLES

Related Articles

TRENDING ARTICLES