Sunday, January 19, 2025

ಭೀಕರ ಅಪಘಾತ ; ಆಟೋದಲ್ಲಿದ್ದ ನಾಲ್ವರು ಸ್ಥಳದಲ್ಲೇ ಸಾವು

ಬೀದರ್ : ಆಟೋಗೆ ಲಾರಿ ಡಿಕ್ಕಿಯಾಗಿ ಮಹಾರಾಷ್ಟ್ರ ಮೂಲದ ನಾಲ್ವರು ಸಾವನ್ನಪ್ಪಿರುವ ಘಟನೆ ಬೀದರ್‌ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಮನ್ನಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

ಪರಿಮಳಾ(35), ಸುನೀಲ್​(35), ಪೂಜಾ(17), ಅನುಸುಬಾಯಿ(65) ಮೃತ ದುರ್ದೈವಿಗಳು. ಇವರು ಮಹಾರಾಷ್ಟ್ರದ ಮುರುಮ್ ಗ್ರಾಮದ ನಿವಾಸಿಗಳೆಂದು ತಿಳಿದುಬಂದಿದೆ.

ಅಪಘಾತದಲ್ಲಿ ಇಬ್ಬರ ಸ್ಥಿತಿ ಚಿಂತಾಚನಕವಾಗಿದ್ದು, ಮಹಾರಾಷ್ಟ್ರದ ಉಮರ್ಗಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಶ್ರಾವಣ ಸೋಮವಾರದ ಹಿನ್ನೆಲೆಯಲ್ಲಿ ಬಸವಕಲ್ಯಾಣದ ಐತಿಹಾಸಿಕ ಶ್ರೀ ಕ್ಷೇತ್ರ ಅಮೃತಕುಂಡಕ್ಕೆ ದರ್ಶನಕ್ಕೆಂದು ಆಗಮಿಸಿದ್ದು, ವಾಪಸ್‌ ತೆರಳುವಾಗ ಘಟನೆ ಸಂಭವಿಸಿದೆ.

ಸುದ್ದಿ ತಿಳಿದು ಶಾಸಕ ಶರಣು ಸಲಗಾರ ಸ್ಥಳಕ್ಕೆ ಭೇಟ ನೀಡಿ, ಗಾಯಾಳುಗಳನ್ನ ಆಸ್ಪತ್ರೆಗೆ ಸಾಗಿಸಲು ನೆರವು ಕಲ್ಪಿಸಿದ್ದಾರೆ. ಪ್ರಕರಣ ಸಂಬಂಧ ಬಸವ ಕಲ್ಯಾಣದ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡ ಬಸವಕಲ್ಯಾಣ ಸಂಚಾರಿ ಠಾಣಾ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

RELATED ARTICLES

Related Articles

TRENDING ARTICLES