Wednesday, January 22, 2025

ಸ್ನೇಹಿತನ ಪತ್ನಿ ಮೇಲೆ ಕಣ್ಣು : ಬಳ್ಳಾರಿ ಪಾಲಿಕೆ ಸದಸ್ಯನ ವಿರುದ್ದ ಎಫ್​ಐಆರ್​ ದಾಖಲು!  

ಬಳ್ಳಾರಿ : ತನ್ನ ಪತ್ನಿ ಮೇಲೆ ಕಣ್ ಹಾಕಿದ ಎಂಬ ಕಾರಣಕ್ಕೆ ಬಳ್ಳಾರಿ ಮಹಾನಗರ ಪಾಲಿಕೆ ಸದಸ್ಯನ ವಿರುದ್ದ ಸ್ನೇಹಿತ ಎಫ್ಐಆರ್​ ದಾಖಲಿಸಿರುವ ಘಟನೆ ನಡೆದಿದೆ.

ಬಳ್ಳಾರಿ ಮಹಾನಗರ ಪಾಲಿಕೆಯ 30ನೇ ವಾರ್ಡ್‌ ಕಾಂಗ್ರೆಸ್ ಸದಸ್ಯ ಆಸೀಫ್‌ ಆರೋಪಿ, ಹುಸೇನ್​ ಎಂಬುವವರಿಂದ ದೂರು ದಾಖಲು.

ಇದನ್ನೂ ಓದಿ: ಚಂದ್ರನನ್ನು ‘ಹಿಂದೂ ರಾಷ್ಟ್ರ’ ಎಂದು ಘೋಷಿಸಿ : ಚಕ್ರಪಾಣಿ ಮಹಾರಾಜ

ಆಸೀಫ್‌ ಹಾಗೂ ಹುಸೇನ್ ಇಬ್ಬರು ಆತ್ಮೀಯ ಸ್ನೇಹಿತರು, ಆಸೀಫ್‌ನ ಎಲ್ಲಾ ವ್ಯವಹಾರಗಳನ್ನು ಹುಸೇನ್ ನೋಡಿಕೊಳ್ತಿದ್ದ, ಹುಸೇನ್‌ ಮನೆಗೆ ಆಸೀಫ್‌ ಬಂದು ಹೋಗ್ತಾ ಈ ವೇಳೆ ಹುಸೇನ್ ಪತ್ನಿ ಜೊತೆ ಆಸೀಫ್‌ಗೆ ಪರಿಚಯವಾಗಿದೆ, ಆಕೆಯ ಮೇಲೆ ಕಣ್ಣು ಹಾಕಿದ್ದಾನೆ, ಈ ವೇಳೆ ಈ ವಿಚಾರ ತಿಳಿದು ಪ್ರಶ್ನಿಸಿದಾಗ ಆಸೀಫ್​ ಹುಸೇನ್​ ಗೆ ಜೀವ ಬೆದರಿಕೆ ಹಾಕಿದ್ದಾನೆ.

ಈ ಸಂಬಂಧ ಬಳ್ಳಾರಿಯ ಕೌಲ್ ಬಜಾರ್ ಪೊಲೀಸ್ ಠಾಣೆಯಲ್ಲಿ ಆಸೀಫ್​ ವಿರುದ್ದ ಎಫ್ಐಆರ್ ದಾಖಲಿಸಲಾಗಿದೆ.

RELATED ARTICLES

Related Articles

TRENDING ARTICLES