Sunday, December 22, 2024

ಚಿಕ್ಕಬಳ್ಳಾಪುರ ಶಾಸಕ ಅಯೋಗ್ಯ : ಡಾ.ಕೆ. ಸುಧಾಕರ್

ಬೆಂಗಳೂರು : ಚಿಕ್ಕಬಳ್ಳಾಪುರ ಶಾಸಕ ಅಯೋಗ್ಯ. ನಾನು ಅಯ್ಯೋಗ್ಯರ ಬಗ್ಗೆ ಮಾತನಾಡಲ್ಲಎಂದು ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಮಾಜಿ ಸಚಿವ ಡಾ.ಕೆ. ಸುಧಾಕರ್ ಗುಡುಗಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಯಾರು‌ ನನ್ನನ್ನು ‌ಕಾಂಗ್ರೆಸ್ಸಿಗೆ ಬರುವಂತೆ ಕರೆದಿಲ್ಲ. ಅಲ್ಲ ರಿ.. ನಮ್ಮ ಮೇಲೆ ತನಿಖೆಗೆ ತಂಡ ರಚಿಸಿದ್ದಾರೆ. ಹೀಗಿದ್ದು, ಕಾಂಗ್ರೆಸ್ಸಿಗೆ ಅವರು ಕರಿತಾರ? ಎಂದು ಸ್ಪಷ್ಟನೆ ನೀಡಿದ್ದಾರೆ.

ನನಗೆ ಯಾರು ಆಫರ್ ನೀಡಿಲ್ಲ. ಲೋಕಸಭಾ ಚುನಾವಣೆ ಟಿಕೆಟ್ ನಾನು ಕೇಳಿಲ್ಲ. ಬೇರೆಯವರು ಕಾಂಗ್ರೆಸ್ಸಿಗೆ ಹೋಗುವುದು ಗೊತ್ತಿಲ್ಲ. ತನಿಖೆ ಮೂಲಕ ನನಗೆ ಕಾಂಗ್ರೆಸ್ ಸೇರಲು ಒತ್ತಡ ಹಾಕಿಲ್ಲ. ತನಿಖೆಯನ್ನು ಸಮರ್ಥವಾಗಿ ನಾನು ಎದುರಿಸುತ್ತೇನೆ ಎಂದು ತಿರುಗೇಟು ಕೊಟ್ಟಿದ್ದಾರೆ.

ಇಡೀ ಬಿಜೆಪಿ ಸರ್ಕಾರ ಟಾರ್ಗೆಟ್

ಸುಧಾಕರ್ ಒಬ್ರೆ ಟಾರ್ಗೆಟ್ ಅಲ್ಲ. ಇಡೀ ಬಿಜೆಪಿ ಸರ್ಕಾರ ಟಾರ್ಗೆಟ್ ಮಾಡುತ್ತಿದ್ದಾರೆ. ಟಾಸ್ಕ್ ಫೋರ್ಸ್ ನಿರ್ಧಾರದಂತೆ ಖರೀದಿ ಮಾಡಲಾಗಿದೆ. ಸಿಎಂ ಇದ್ರು, ಅದೆ ಅಧಿಕಾರಿಗಳು ಇದ್ದಾರೆ. ಅಧಿಕಾರಿಗಳ ಮೇಲೆ ಅಪನಂಬಿಕೆ ಇದ್ರೆ, ಅವರನ್ನು ಯಾಕೆ ಮುಂದುವರಿಸುತ್ತೀರಾ? ಅದೆ ಅಧಿಕಾರಿಗಳು ಆಡಳಿತ ಮಾಡುತ್ತಿದ್ದಾರೆ. ಇದಕ್ಕೆ ಏನು ಹೇಳ್ತಿರಾ? ಎಂದು ಪ್ರಶ್ನೆ ಮಾಡಿದ್ದಾರೆ.

RELATED ARTICLES

Related Articles

TRENDING ARTICLES