ವಿಜಯಪುರ : ಸಿ ವೋಟರ್ಸ್ ಪ್ರಕಾರ ಕೇಂದ್ರದಲ್ಲಿ ಮತ್ತೊಮ್ಮೆ ಮೋದಿ 3ನೇ ಅವಧಿಗೆ ಪ್ರಧಾನಿ ಆಗ್ತಾರೆ. ಕನಿಷ್ಟ 300 ಸೀಟು ಬಿಜೆಪಿ ಗೆಲ್ಲುವ ವಾತಾವರಣ ಸೃಷ್ಟಿಯಾಗಿದೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.
ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಇದರಿಂದ ಕಾಂಗ್ರೆಸ್ ಹತಾಶೆಯಾಗಿದೆ. ಹೀಗಾಗಿ ಕಾಂಗ್ರೆಸ್ ಗಾಳಿ ಸುದ್ದಿ ಹರಡುತ್ತಿದೆ. ಈವರೆಗೆ ಯಾರು ಕಾಂಗ್ರೆಸ್ ಸೇರಿದ್ದಾರೆ ಹೇಳಿ. ಹೆಬ್ಬಾರ್ ಸೇರಿದ್ರಾ, ರೇಣುಕಾಚಾರ್ಯ ಸೇರಿದ್ರಾ? ಯಾರು ಸಹ ಸೇರಿಲ್ಲ ಎಂದು ಕುಟುಕಿದರು.
ಮೋದಿ ಕಾಲದಲ್ಲಿ ಯಾರು ಬಿಜೆಪಿ ಬಿಟ್ಟು ಹೋಗಲ್ಲ. ಮೋದಿ ಭಾರತವನ್ನು ವಿಶ್ವಮಟ್ಟಕ್ಕೆ ಕೊಂಡೊಯ್ದಿದ್ದಾರೆ. ಆಪರೇಶನ್ ಕಾಂಗ್ರೆಸ್ ಸೃಷ್ಟಿ. ಮುನಿಯನಕೊಪ್ಪ ಕೂಡ ಕಾಂಗ್ರೆಸ್‌ಗೆ ಹೋಗಲ್ಲ. ನಾನು ಮುನಿಯನಕೊಪ್ಪ ಜೊತೆಗೆ ಮಾತನಾಡಿದ್ದೇನೆ. ಬಿಜೆಪಿಯಲ್ಲೆ ಇರ್ತಿನಿ ಎಂದಿದ್ದಾರೆ. ಇದನ್ನ ಹೇಳಲು ಪತ್ರಿಕಾಗೋಷ್ಠಿ ಕರೆದಿದ್ದೇನೆ ಎಂದಿದ್ದಾರೆ. ಸುಖಾಸುಮ್ಮನೆ ಸುದ್ದಿ ಹರಡುತ್ತಿದ್ದಾರೆ ಎಂದು ಹೇಳಿದರು.
ನಾನು ಕಾಂಗ್ರೆಸ್ ಸೇರ್ತಿನಿ ಅಂತ ಅರ್ಥವಾ?
ಮಾಜಿ ಸಚಿವ ಎಂ.ಪಿ ರೇಣುಕಾಚಾರ್ಯ ಅವರು ಸಿಎಂ, ಡಿಸಿಎಂ ಭೇಟಿ ವಿಚಾರವಾಗಿ ಮಾತನಾಡಿದ ಯತ್ನಾಳ್, ಅವರು ಹಾಗೇ ಅಡ್ಡಾಡ್ತಾರೆ ಬಿಡಿ ಎಂದು ಹಾಸ್ಯ ಮಾಡಿದರು. ಅಭಿವೃದ್ಧಿ ದೃಷ್ಟಿಯಿಂದ ಶಾಸಕರು ಸಿಎಂ ಭೇಟಿ ಮಾಡ್ತಾರೆ. ಅಭಿವೃದ್ಧಿ, ಡೆವಲಪ್ಮೆಂಟ್ ಗಾಗಿ ಸಿಎಂ ಭೇಟಿ ಮಾಡಿದ್ರೆ ನಾನು ಕಾಂಗ್ರೆಸ್ ಸೇರ್ತಿನಿ ಅಂತ ಅರ್ಥವಾ? ಎಂದು ಪ್ರಶ್ನಿಸಿದರು.