Wednesday, January 22, 2025

ಹ್ಯಾಪಿ ಆಗಿರೋಕೆ ‘ಒಂಟಿ’ಯಾಗಿರೋದೇ ಲೇಸು : ಮತ್ತೆ ದರ್ಶನ್ ಟ್ವೀಟ್

ಬೆಂಗಳೂರು : ಇಂದು ಬೆಳಗ್ಗೆ 6 ಗಂಟೆಗೆ ಜೋಡೆತ್ತು ಫೋಟೋ ಜೊತೆ ಟ್ವೀಟ್​ ಮಾಡಿದ್ದ ನಟ ದರ್ಶನ್ ತೂಗುದೀಪ ಅವರು ಇದೀಗ ಮತ್ತೊಂದು ಟ್ವೀಟ್ ಮಾಡಿದ್ದಾರೆ.

‘ಖುಷಿಯಾಗಿರೋಕೆ ಒಂಟಿಯಾಗಿರೋದೇ ಲೇಸು’ ಎಂದು ಟ್ವೀಟ್​ನಲ್ಲಿ ಬರೆದುಕೊಂಡಿದ್ದಾರೆ. ಡಿ ಬಾಸ್ ನಡೆ ನಿಜಕ್ಕೂ ನಿಗೂಢವಾಗಿದೆ.

ಜೋಡೆತ್ತು ಸೀಕ್ರೆಟ್ ನಟ ಸುದೀಪ್ ಜೊತೆ ಕೈ ಜೋಡಿಸೋದಲ್ಲ ಎನ್ನುವ ಅರ್ಥದಲ್ಲಿ ದರ್ಶನ್ ಟ್ವೀಟ್ ಮಾಡಿದ್ದಾರೆ. ಅಲ್ಲದೇ, ‘ನನ್ನ ಸೆಲೆಬ್ರಿಟೀಸ್ (ಅಭಿಮಾನಿಗಳು) ಜೊತೆಗಿರೋದೇ ನನಗೆ ಖುಷಿ’ ಎಂದು ದರ್ಶನ್ ಪೋಸ್ಟ್​ನಲ್ಲಿ ಉಲ್ಲೇಖಿಸಿದ್ದಾರೆ.

ನೀವೇ ನಮ್ಮ ಪ್ರಾಣ ಎಂದ ಫ್ಯಾನ್ಸ್​

ದರ್ಶನ್ ಪೋಸ್ಟ್​ಗೆ ಅಭಿಮಾನಿಗಳು ಕಮೆಂಟ್ ಮಾಡಿದ್ದಾರೆ. ‘ನೀವೇ ನಮ್ಮ ಪ್ರಾಣ, ಅಭಿಮಾನಿಗಳ ಆಸ್ತಿ ನೀವೇ.. ಸದಾ ನಿಮ್ಮೊಂದಿಗೆ ಬಾಸ್.. ನಮ್ಮ ಕೊನೆ ಉಸಿರು ಇರೋವರೆಗೂ ನಿಮ್ಮ ಜೊತೆ ಇರ್ತಿವಿ. ನಿಮ್ಮ ಖುಷಿಯೇ ನಮ್ಮ ಖುಷಿ. ನೀವ್ ಎಂಗೋ ನಾವ್ ಕೂಡ ಅಂಗೆ’ ಎಂದು ಅಭಿಮಾನಿಗಳು ಕಮೆಂಟ್ ಮೂಲಕ ದಾಸನಿಗೆ ಅಭಯ ನೀಡಿದ್ದಾರೆ.

ಬೆಳಗ್ಗೆ ಟ್ವೀಟ್ ಮಾಡಿದ್ದ ‘ಡಿ’ ಬಾಸ್

ನಟಿ, ಸಂಸದೆ ಸುಮಲತಾ ಬರ್ತ್‌ಡೇ ಪಾರ್ಟಿಯಲ್ಲಿ ನಟ ದರ್ಶನ್ ಹಾಗೂ ಸುದೀಪ್ ಇಬ್ಬರೂ ದೂರ ದೂರ ನಿಂತಿದ್ದರಾದರೂ ಒಂದೇ ವೇದಿಕೆ ಮೇಲೆ ಕಂಡು ಬಂದರು. ಈ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು. ಇಂದು ನಟ ದರ್ಶನ್‌, ತಮ್ಮ ಸೋಶಿಯಲ್‌ ಮೀಡಿಯಾದಲ್ಲಿ ಜೋಡೆತ್ತುಗಳ ಜೊತೆಯಲ್ಲಿ ನಿಂತಿರುವ ಫೋಟೋ ಹಂಚಿಕೊಂಡು ‘ಕಾಲಾಯ ತಸ್ಮಯ್ ನಮಃ..’ ಎಂದು ಬರೆದುಕೊಂಡಿದ್ದರು.

ಇನ್ನೂ, ಸೆಪ್ಟೆಂಬರ್‌ 2 ರಂದು ನಟ ಸುದೀಪ್ ಹುಟ್ಟುಹಬ್ಬ. ಅಂದು ಡಿ ಬಾಸ್ ತನ್ನ ಕುಚಿಕು ಗೆಳೆಯ ಸುದೀಪ್‌ ಅವರಿಗೆ ಹುಟ್ಟುಹಬ್ಬದ ವಿಶ್‌ ಮಾಡುತ್ತಾರಾ? ಈ ಮೂಲಕ ಇಬ್ಬರೂ ಮತ್ತೆ ಒಂದಾಗುತ್ತಾರಾ? ಅಂತ ಕಾದುನೋಡಬೇಕಿದೆ.

RELATED ARTICLES

Related Articles

TRENDING ARTICLES