Friday, May 17, 2024

ಚಂದ್ರನ ಮೇಲ್ಮೈಗೆ ಹೆಸರಿಡುವ ಹಕ್ಕನ್ನು ಮೋದಿಗೆ ಕಟ್ಟವರು ಯಾರು?: ರಶೀದ್​ ಅಲ್ವಿ

ಚಂದ್ರನ ಮೇಲ್ಮೈಗೆ ಹೆಸರಿಡುವ ಹಕ್ಕನ್ನು ನರೇಂದ್ರ ಮೋದಿಗೆ ನೀಡಿದವರು ಯಾರು? ಇದು ಹಾಸ್ಯಾsಸ್ಪದ ಎಂದು ಕಾಂಗ್ರೆಸ್​ನ ಹಿರಿಯ ನಾಯಕ ರಶೀದ್ ಅಲ್ವಿ ಮೋದಿ ವಿರುದ್ದ ಕಿಡಿಕಾರಿದ್ದಾರೆ.

ಖಾಸಗಿ ಮಾಧ್ಯಕ್ಕೆ ಪ್ರತಿಕ್ರಿಯಿಸಿದ ಅವರು, ‘ಚಂದ್ರನ ಮೇಲ್ಮೈಗೆ ಹೆಸರಿಡುವ ಹಕ್ಕನ್ನು ನರೇಂದ್ರ ಮೋದಿಗೆ ನೀಡಿದವರು ಯಾರು? ಇದು ಹಾಸ್ಯಾಸ್ಪದ. ಈ ನಾಮಕರಣದ ನಂತರ ಇಡೀ ಜಗತ್ತು ನಮ್ಮನ್ನು ನೋಡಿ ನಗುತ್ತದೆ. ಚಂದ್ರನ ಆ ಸ್ಥಳದಲ್ಲಿ ಲ್ಯಾಂಡಿಂಗ್ ಸಂಭವಿಸಿದೆ. ಇದು ತುಂಬಾ ಒಳ್ಳೆಯದು ಮತ್ತು ನಾವು ಅದರ ಬಗ್ಗೆ ಹೆಮ್ಮೆಪಡುತ್ತೇವೆ. ಅದರಲ್ಲಿ ಯಾರೂ ಅನುಮಾನಿಸಬಾರದು.

ಆದರೆ, ನಾವು ಚಂದ್ರನ ಮಾಲೀಕರಲ್ಲ, ಆ ಲ್ಯಾಂಡಿಂಗ್ ಪಾಯಿಂಟ್ ಅನ್ನು ನಾವು ಹೊಂದಿಲ್ಲ. ಇದನ್ನು ಮಾಡುವುದು ಬಿಜೆಪಿಯ ಅಭ್ಯಾಸವಾಗಿದೆ. ಅಧಿಕಾರಕ್ಕೆ ಬಂದಾಗಿನಿಂದಲೂ ಹೆಸರು ಬದಲಿಸಿಕೊಳ್ಳುವುದು ಅವರ ಅಭ್ಯಾಸವಾಗಿದೆ ಎಂದು ಕಿಡಿಕಾರಿದರು.

ಶಿವಶಕ್ತಿ ಪಾಯಿಂಟ್​ ಎಂದು ಹೆಸರಿಟ್ಟ ಮೋದಿ :

ಚಂದ್ರಯಾನ 3 ಚಂದ್ರನ ಮೇಲ್ಮೈ ಮೇಲೆ ವಿಕ್ರಮ್​​ ಲ್ಯಾಂಡರ್​ ಯಶಸ್ವಿಯಾಗಿ ಲ್ಯಾಂಡ್​ ಆದ ಹಿನ್ನೆಲೆ ಶನಿವಾರ ಬೆಳಗ್ಗೆ ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿನ ಇಸ್ರೋ ನಿಯಂತ್ರಣ ಕೇಂದ್ರಕ್ಕೆ ಆಗಮಿಸಿ ವಿಜ್ಞಾನಿ ಗಳನ್ನು ಶ್ಲಾಘಿಸಿ ಸಂವಾದ ನಡೆಸುವ ವೇಳೆ ಮಾತನಾಡಿದ ಅವರು, ನಮ್ಮ ಚಂದ್ರಯಾನವು ಬಂದಿಳಿದ ಚಂದ್ರನ ಭಾಗಕ್ಕೆ ಹೆಸರಿಸಲು ಭಾರತ ನಿರ್ಧರಿಸಿದೆ. ಚಂದ್ರಯಾನ -3ರ ಚಂದ್ರನ ಲ್ಯಾಂಡರ್ ಇಳಿದ ಸ್ಥಳವನ್ನು ಈಗ ‘ಶಿವಶಕ್ತಿ’ ಪಾಯಿಂಟ್ ಎಂದು ಕರೆಯಲಾಗುತ್ತದೆ ಎಂದು ಹೇಳಿಕೆ ನೀಡಿದ್ದರು.

RELATED ARTICLES

Related Articles

TRENDING ARTICLES