Wednesday, January 22, 2025

ಮದುವೆ ಬೇಡ ಎಂದು ಹಸೆಮಣೆಯಿಂದ ಎದ್ದು ಹೊರ ನಡೆದ ವಧು : ವರ ಕಂಗಾಲು!  

ತುಮಕೂರು : ರಾತ್ರಿ ರಿಸೆಪ್ಷನ್​ ನಲ್ಲಿ ನಗುನಗುತ್ತಲೇ ಫೋಟೋಗೆ ಪೋಸ್​ ಕೊಟ್ಟ ವಧು ತಾಳಿ ಕಟ್ಟೋ ವೇಳೆ ಹಸೆ‌ಮಣೆಯಿಂದ ಎದ್ದು ಮದುವೆ ಬೇಡ ಎಂದ ಘಟನೆ ಕೊರಟಗೆರೆ ತಾಲ್ಲೂಕಿನ ಕೊಳಾಲ ಗ್ರಾಮದಲ್ಲಿ ಇಂದು ನಡೆದಿದೆ.

ಕೊಳಾಲ ಗ್ರಾಮದ ಕೆ.ಸಿ.ಎನ್. ಕನ್ವೆನ್ಷನ್ ಹಾಲ್ ನಲ್ಲಿ ಇಂದು ಬೆಳಗ್ಗೆ ನಡೆಯಬೇಕಿದ್ದ ಮದುವೆ ಸಮಾರಂಭದಲ್ಲಿ ಮುಹೂರ್ಥದ ವೇಳೆ ನನಗೆ ಮದುವೆ ಬೇಡ ಬೇರೆ ಹುಡುಗನನ್ನ ಪ್ರೀತಿಸುತ್ತಿದ್ದೇನೆ ಈ ಮದುವೆ ನಿಲ್ಲಿಸಿ ಎಂದು ನಡೆಯಬೇಕಿದ್ದ ಶುಭಕಾರ್ಯವನ್ನು ರದ್ದುಗೊಳಿಸಿದ್ದಾರೆ.

ದೊಡ್ಡಬಳ್ಳಾಪುರ ಮೂಲದ ವರ ಮತ್ತು ನೆಲಮಂಗಲ ತಾಲೂಕಿನ ವದು ಇಬ್ಬರ ಮದುವೆ ಸಮಾರಂಭ ಇಂದು ನಡೆಯಬೇಕಾಗಿತ್ತು. ಆದರೇ, ಹುಡುಗಿ ಉಲ್ಟಾ ಹೊಡೆಯುತ್ತಿದ್ದಂತೆ ಕಲ್ಯಾಣ ಮಂಟಪದಲ್ಲಿ ಗದ್ದಲ ಏರ್ಪಟ್ಟು ಎರಡು ಕುಟುಂಬಗಳ ನಡುವೆ ಮಾತಿನ ಚಕಮಕಿ ನಡೆದಿದೆ.

ಸದ್ಯ ಈ ಘಟನೆಯಿಂದಾಗಿ ಎರಡು ಕುಟುಂಬಗಳು  ಕೊಳಾಲ‌ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾರೆ.

RELATED ARTICLES

Related Articles

TRENDING ARTICLES