Tuesday, December 24, 2024

ಜೈಲ್ ಕಾಂಪೌಂಡ್ ಹಾರಿ ಆರೋಪಿ ಎಸ್ಕೇಪ್ ; ಸಿಸಿ ಕ್ಯಾಮೆರಾದಲ್ಲಿ ಸೆರೆ

ದಾವಣಗೆರೆ : ಜೈಲ್ ಕಾಂಪೌಂಡ್​ನಿಂದ ಹಾರಿ ಪರಾರಿಯಾದ ಅತ್ಯಾಚಾರ ಪ್ರಕರಣದ ಆರೋಪಿ ಘಟನೆ ದಾವಣಗೆರೆ ನಗರದ ಉಪಕಾರಾಗೃಹದಲ್ಲಿ ನಡೆದಿದೆ.

ದಾವಣಗೆರೆ ನಗರದ ಹೊರವಲಯದ ಕರೂರ ನಿವಾಸಿ ವಸಂತ (23) ಪರಾರಿಯಾದ ಆರೋಪಿ. ಎಂಬಾತ ಆಟೋ ಚಾಲನೆ ಮಾಡುತ್ತಿದ್ದನು. ಕಳೆದ ಎರಡು ದಿನಗಳ ಹಿಂದೆ ದಾವಣಗೆರೆ ಮಹಿಳಾ ಠಾಣೆಯಲ್ಲಿ ಅತ್ಯಾಚಾರದ ಪ್ರಕರಣದ ಹಿನ್ನೆಲೆ ಬಂಧಿಸಿ ಜೈಲಿಗೆ ಕಳುಹಿಸಿದ್ದ ಮಹಿಳಾ ಪೋಲಿಸರು.

ಇದನ್ನು ಓದಿ : ಗುಡ್ ನ್ಯೂಸ್ : 10 ಕೆಜಿ ಅಕ್ಕಿ ವಿತರಿಸಲು ನಿರ್ಧಾರ

ಆದರೆ ನಿನ್ನೆ ಉಪ ಕಾರಾಗೃಹದ ಎತ್ತರದ ಗೋಡೆ ಜಿಗಿದು ಪರಾರಿಯಾಗಿದ್ದಾನೆ. ಆರೋಪಿ ಕಾಲಿಗೆ ಪೆಟ್ಟಾದ್ರು ಲೆಕ್ಕಿಸದೇ ಪರಾರಿಯಾಗುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಬಳಿಕ ನಾಪತ್ತೆಯಾದ ಕೆಲ ಹೊತ್ತಿನಲ್ಲಿಯೇ ಜೈಲ ಸಿಬ್ಬಂದಿಗೆ ಮಾಹಿತಿ ತಿಳಿದಿದೆ.

ಈ ಘಟನಾ ಸಂಬಂಧ ಬಸವನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮತ್ತೆ ಯಾರಿಗಾದರೂ ತೊಂದರೆ ಮಾಡಬಹುದು ಎಂಬ ಶಂಕೆಯಿಂದ ಆರೋಪಿ ಬಂಧನಕ್ಕೆ ಮುಂದಾದ ಪೋಲಿಸ್ ಸಿಬ್ಬಂದಿಗಳು.

RELATED ARTICLES

Related Articles

TRENDING ARTICLES