Wednesday, December 18, 2024

UPA ಅಂದ್ರೆ ಜನ ಛೀ.. ಥೂ.. ಅಂತ ಉಗಿತಾರೆ : ಪ್ರಲ್ಹಾದ್ ಜೋಶಿ

ಹುಬ್ಬಳ್ಳಿ : ಯುಪಿಎ (UPA) ಅಂದ್ರೆ ಜನ ಛೀ.. ಥೂ.. ಅಂತ ಉಗಿತಾರೆ ಅಂತ ಹೆಸರು ಚೇಂಜ್ ಮಾಡಿದ್ರು ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕುಟುಕಿದರು.

ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಬೇಲ್ ಮೇಲಿದ್ದಾರೆ. ಇವತ್ತು ಬಿಜೆಪಿ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಛೇಡಿಸಿದರು.

ಕಾಂಗ್ರೆಸ್ ಪಾರ್ಟಿ ಭ್ರಷ್ಟಾಚಾರದ ರಕ್ತ ಬಿಜಾಸುರರಿದ್ದಂತೆ. ಇಡೀ ದೇಶದಲ್ಲಿ ನೆಹರು ಕಾಲದಿಂದ ಹಿಡಿದು ಭ್ರಷ್ಟಾಚಾರ ಮಾಡಿದಂತವರು ಕಾಂಗ್ರೆಸ್ ನವರು. ಈಗ ನಾವು ಹೇಳ್ತಿಲ್ಲ, ನಿಮ್ಮ ಪಕ್ಷದ ಶಾಸಕರೇ ಹೇಳ್ತಾ ಇದ್ದಾರೆ. ವರ್ಗಾವಣೆಯಿಂದ ಹಿಡಿದು ಎಲ್ಲದರಲ್ಲೂ ಭ್ರಷ್ಟಾಚಾರ ಇದೆ ಅಂತ ಅವರು ಹೇಳಿದ್ದಾರೆ ಎಂದು ಕಿಡಿಕಾರಿದರು.

12 ಲಕ್ಷ ಕೋಟಿ ಭ್ರಷ್ಟಾಚಾರ ಆಗಿದೆ

ಬಸವರಾಜ ರಾಯರೆಡ್ಡಿ ಅವರು ಭ್ರಷ್ಟಾಚಾರ ಬಹಳ ಆಗಿದೆ ಅಂತ ಹೇಳಿದ್ದಾರೆ. ಇದನ್ನೆಲ್ಲ ಮೊದಲು ನೋಡ್ಕೊಳಿ. ಕಾಂಗ್ರೆಸ್​ಗೆ ಇನ್ನೊಂದು ಹೆಸರೇ ಭ್ರಷ್ಟಾಚಾರ. ಕಾಂಗ್ರೆಸ್ ಅವರು ಯಾಕೆ UPA ಚೇಂಜ್ ಮಾಡಿದ್ದಾರೆ ಅಂತ ಲೆಕ್ಕ ಹಾಕ್ತಾ ಇದ್ವಿ. ಅಂಗಡಿ, ಫ್ಯಾಕ್ಟರಿಗಳಲ್ಲಿ ಪ್ರೊಡಕ್ಟ್ ಅದೇ ಇರುತ್ತೆ ಹೆಸರು ಬದಲಾಯಿಸುತ್ತಾರೆ ಆ ರೀತಿ ಆಗಿದೆ. ಅಮಿತ್ ಶಾ ಅವರು ಭಾಷಣದಲ್ಲೂ ಹೇಳಿದ್ದಾರೆ. UPA ಕಾಲದಲ್ಲಿ 12 ಲಕ್ಷ ಕೋಟಿ ಭ್ರಷ್ಟಾಚಾರ ಆಗಿದೆ ಅಂತ ಎಂದು ವಾಗ್ದಾಳಿ ನಡೆಸಿದರು.

ತನಿಖೆಗೆ ನಮ್ಮ ಅಭ್ಯಂತರ ಇಲ್ಲ

ನಿಮ್ಮ ಕಾಲದಲ್ಲಿ ಬೇರೆ ದೇಶದಿಂದ ವೀಸಾ ತಗೊಂಡು ಒಳಗೆ ಬರಬೇಕು ಅಂದ್ರೆ, ಕೌನ್ಸಿಲೆಟ್ ನಲ್ಲಿ ಕೂಡ ದುಡ್ಡು ತಗೋತಾರೆ ಅಂತ ಆರೋಪ ಇತ್ತು. ಇಂತ ಭ್ರಷ್ಟಾಚಾರ ನಡೆಸಿದ ನೀವು ಬಿಜೆಪಿ ಭ್ರಷ್ಟಾಚಾರ ಬಗ್ಗೆ ಮಾತಾಡ್ತೀರಾ? ಇದರಲ್ಲಿ ವೆಂಜೇನ್ ಫುಲ್ ಆಕ್ತಿವಿಟಿ ಆದ್ರೂ ಸಹಿತ ತನಿಖೆ ಮಾಡಲು ನಮ್ಮ ಅಭ್ಯಂತರ ಇಲ್ಲ ಎಂದು ಹೇಳಿದ್ದಾರೆ.

RELATED ARTICLES

Related Articles

TRENDING ARTICLES