Thursday, December 19, 2024

ಡಿ.ಕೆ ಶಿವಕುಮಾರ್ ಸಿಎಂ ಆಗಲಿ : ಕಾಂಗ್ರೆಸ್​ ಶಾಸಕ

ತುಮಕೂರು : ಸಿದ್ದರಾಮಯ್ಯ ಸಿಎಂ ಆಗಿದ್ದರೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇದೇ ಅವಧಿಯಲ್ಲಿ ಮುಖ್ಯಮಂತ್ರಿ ಆಗಲಿ ಎಂಬ ಅಭಿಪ್ರಾಯಗಳನ್ನು ಕೆಲವರು ಹೇಳುತ್ತಲೇ ಇದ್ದಾರೆ.

ಇದೀಗ, ತಿಪಟೂರಿನ ಕಾಂಗ್ರೆಸ್ ಶಾಸಕ ಕೆ.ಷಡಕ್ಷರಿ ಕೂಡ ಮುಖ್ಯಮಂತ್ರಿ ಆಗುವ ಡಿ.ಕೆ ಶಿವಕುಮಾರ್ ಅವರ ಆಸೆಯನ್ನು ಬಿಚ್ಚಿಟ್ಟಿದ್ದಾರೆ.

ಡಿ.ಕೆ. ಶಿವಕುಮಾರ್ ಅವರಿ​​ಗೆ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಆಗಬೇಕು ಎಂಬ ಆಸೆ ಇದೆ. ಇವರ ಈ ಆಸೆಯನ್ನು ಗಂಗಾಧರ ಅಜ್ಜ ನೇರವೇರಿಸುತ್ತಾರೆ ಎಂದು ಭಾವಿಸುತ್ತೇನೆ ಎಂದು ಹೇಳಿದ್ದಾರೆ.

ಡಿಸಿಎಂ ಡಿ.ಕೆ.ಶಿವಕುಮಾರ್ ವೈಯಕ್ತಿಕವಾಗಿ ಆಗಲಿ, ಜೊತೆಗೆ ಕುಟುಂಬಸ್ಥರಾಗಲಿ, ಏನಾದರೂ ಆಗಲಿ , ಮೊದಲು ಅಜ್ಜಯ್ಯ ಗಂಗಾಧರ ಪೀಠವನ್ನ ದರ್ಶನ ಪಡೆದು ಆಶಿರ್ವಾದ ಪಡೆದು ಹೋಗುತ್ತಾರೆ. ಈ ಕ್ಷೇತ್ರದ ಮೇಲೆ ಡಿ.ಕೆ.ಶಿವಕುಮಾರ್ ಅಪಾರ ನಂಬಿಕೆ ಇಟ್ಟುಕೊಂಡಿದ್ದಾರೆ. ತಿಪಟೂರು ತಾಲೂಕಿನಲ್ಲಿ ನೀರಾವರಿಗೆ ಹೆಚ್ಚು ಆದ್ಯತೆ ನೀಡಬೇಕಿದೆ ಎಂದು ತಿಳಿಸಿದ್ದಾರೆ.

ನನ್ನ ಸಂಪರ್ಕದಲ್ಲಿ ಯಾರೂ ಇಲ್ಲ

ಮಾಧ್ಯಮದವರಿಗೆ ಎಷ್ಟು ಮಾಹಿತಿ ಇದೆ, ಅಷ್ಟೇ ನಂಗೂ ಮಾಹಿತಿ ಇರೋದು. ಹಂತ ಹಂತವಾಗಿ ಯಾವ‌ ಜಿಲ್ಲೆಯಿಂದ ಯಾರು ಬರ್ತಿದ್ದಾರೆ ಗೊತ್ತಿಲ್ಲ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ. ಧಾರವಾಡದಲ್ಲಿ ಮಾತನಾಡಿದ ಅವರು, ಧಾರವಾಡ ಜಿಲ್ಲೆಯಿಂದ ಮಾಜಿ ಶಾಸಕ ಚಿಕ್ಕನಗೌಡ್ರು ಬರ್ತಾರೆ ಅಂತಾ ಮಾಹಿತಿ ಇದೆ. ಹಾಗೂ ಮಾಜಿ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ಬರ್ತಾರೆ ಅಂತಾ ಮಾಹಿತಿ ಇದೆ. ಈ ಇಬ್ಬರು ಬರುವ ಬಗ್ಗೆ ಮಾತ್ರ ಮಾಹಿತಿ ಇದೆ. ಉಳಿದಂತೆ ನನ್ನ ಸಂಪರ್ಕದಲ್ಲಿ ಯಾರೂ ಇಲ್ಲ ಎಂದರು.

RELATED ARTICLES

Related Articles

TRENDING ARTICLES