ಯಾದಗಿರಿ : ದೇಶದ ಹೆಮ್ಮೆಯ ಪ್ರತೀಕವಾದ ರಾಷ್ಟ್ರ ಲಾಂಛನಕ್ಕೆ ಯಾದಗಿರಿಯಲ್ಲಿ ಅವಮಾನ ಮಾಡಲಾಗಿದೆ. ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ರಾಷ್ಟ್ರಲಾಂಛನ ಅನಾಥವಾಗಿದೆ.
ಯಾದಗಿರಿಯ ವಡಗೇರಾದಲ್ಲಿ ಬೀದಿಬದಿ ದೇವಸ್ಥಾನದ ಕಟ್ಟೆ ಮೇಲಿರುವ ಅಶೋಕ ಚಕ್ರದ ಬೃಹತ್ ಲಾಂಛನ, ಕಳೆದ ನಾಲ್ಕೈದು ವರ್ಷಗಳಿಂದ ಬೀದಿಯಲ್ಲೇ ಇದೆ.
1996ರಲ್ಲಿ ಗ್ರಾಮದಲ್ಲಿ 50ರಿಂದ 60 ಸಾವಿರಾರು ರೂಪಾಯಿ ಖರ್ಚು ಮಾಡಿ ಮುಖ್ಯದ್ವಾರಕ್ಕೆ ರಾಷ್ಟ್ರ ಲಾಂಛನ ಅಳವಡಿಸಲಾಗಿತ್ತು. ಕಳೆದ ನಾಲ್ಕೈದು ವರ್ಷಗಳ ಹಿಂದೆ ರಸ್ತೆ ಅಗಲೀಕರಣದ ವೇಳೆ ರಾಷ್ಟ್ರ ಲಾಂಛನ ತೆಗೆಯಲಾಗಿತ್ತು. ಅಂದಿನಿಂದ ಇಂದಿನವರೆಗೂ ರಾಷ್ಟ್ರ ಲಾಂಛನ ಅನಾಥವಾಗಿ ಬಿದ್ದಿದೆ.
ಲಾಂಛನ ಸುರಕ್ಷಿತವಾಗಿಡದೇ ನಿರ್ಲಕ್ಷ್ಯ ಮಾಡಿ, ರಾಷ್ಟ್ರ ಲಾಂಛನಕ್ಕೆ ಅವಮಾನ ಮಾಡಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ವಡಗೇರಾ ಗ್ರಾಮಸ್ಥರು ಹಿಡಿಶಾಪ ಹಾಕುತ್ತಿದ್ದಾರೆ. ಕೂಡಲೇ ಗೌರವ ಸೂಚಿಸುವ ಕೆಲಸ ಮಾಡಬೇಕು ಅಂತಾ ಆಕ್ರೋಶ ಹೊರಹಾಕುತ್ತಿದ್ದಾರೆ.