Sunday, January 19, 2025

Big Update : ಚಂದ್ರನ ತಾಪಮಾನ ಪತ್ತೆ ಹಚ್ಚಿದ ರೋವರ್

ಬೆಂಗಳೂರು : ಚಂದ್ರಯಾನ-3 ಕುರಿತು ಇಸ್ರೋ ವಿಜ್ಞಾನಿಗಳು ಮತ್ತೊಂದು ಬಿಗ್ ಅಪ್ಡೇಟ್​ ಕೊಟ್ಟಿದ್ದಾರೆ.

ಈ ಕುರಿತು ಟ್ವೀಟ್​ ಮಾಡಿರುವ ಇಸ್ರೋ, ಪ್ರಜ್ಞಾನ್​ ರೋವರ್ ಚಂದ್ರನ ತಾಪಮಾನ ಪರೀಕ್ಷಾ ವರದಿಯನ್ನು ಕಳುಹಿಸಿದೆ ಎಂದು ಹೇಳಿದೆ.

ಚಂದ್ರನಲ್ಲಿ ಹಗಲಿನಲ್ಲಿ 50 ಡಿಗ್ರಿ ಸೆಲ್ಸಿಯಸ್​ ನಿಂದ 10 ಡಿಗ್ರಿ ಸೆಲ್ಸಿಯಸ್ ವರೆಗೆ ತಾಪಮಾನ ಕಂಡುಬಂದಿದೆ. ರೋವರ್ 10 ಸೆಂ. ಮೀಟರ್ ನೆಲವನ್ನು ಕೊರೆದು ತಾಪಮಾನ ಪತ್ತೆ ಹಚ್ಚಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ. 10 ಸೆನ್ಸಾರ್ಸ್​ಗಳು ಚಂದ್ರನ 10 ಸೆ.ಮೀ ಆಳಕ್ಕೆ ಇಳಿದಿವೆ. ಈ ಕುರಿತು ರೋವರ್ ಅಧ್ಯಯನ ನಡೆಸುತ್ತಿದೆ.

5 ಉಪಕರಣಗಳನ್ನು ಆನ್

ಇಸ್ರೋ ಅದ್ಯಕ್ಷ ಎಸ್. ಸೋಮನಾಥ್ ಮಾತನಾಡಿದ್ದು, ಲ್ಯಾಂಡರ್ ಮತ್ತು ರೋವರ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಎಲ್ಲಾ 5 ಉಪಕರಣಗಳನ್ನು ಆನ್ ಮಾಡಲಾಗಿದೆ. ಸಮರ್ಪಕವಾದ ಡೇಟಾ ನಮ್ಮ  ಕೈಸೇರುತ್ತಿದೆ. ಉಳಿದ, 10 ದಿನಗಳಲ್ಲಿ ನಮ್ಮ ಎಲ್ಲಾ ಪ್ರಯೋಗಗಳು ಪೂರ್ಣವಾಗಲಿವೆ ಎಂದು ಹೇಳಿದ್ದಾರೆ.

RELATED ARTICLES

Related Articles

TRENDING ARTICLES