Wednesday, December 25, 2024

ತಂದೆಯಿಂದಲೇ ಮಗಳ ಮರ್ಯಾದೆ ಹತ್ಯೆ

ಕೋಲಾರ : ಮಗಳ ಪ್ರೀತಿಯ ವಿಚಾರ ತಿಳಿದು ಮಾತು ಕೇಳದ ಹೆತ್ತ ಮಗಳನ್ನೇ ಕೊಲೆ ಮಾಡಿರುವ ಘಟನೆ ತಾಲೂಕಿನ ತೊಟ್ಟಿ ಗ್ರಾಮದಲ್ಲಿ ನಡೆದಿದೆ.

ರಮ್ಯಾ (19) ಕೊಲೆಯಾದ ದುರ್ದೈವಿ. ಎಂಬ ಯುವತಿ ಅನ್ಯ ಜಾತಿಯ ಯುವಕನನ್ನು ಪ್ರೀತಿಸುತ್ತಿದ್ದಳು. ಆ ವಿಚಾರ ಅವಳ ತಂದೆ ವೆಂಕಟೇಶಗೌಡ ಅವರಿಗೆ ಮಾಹಿತಿ ಸಿಕಿದ್ದ ಹಿನ್ನೆಲೆ ಮಗಳನ್ನು ಕೂರಿಸಿಕೊಂಡು ಬುದ್ಧಿವಾದ ಹೇಳಿದ್ದ ಪೋಷಕರು. ಬಳಿಕ ಆಗಸ್ಟ್ 15 ರಂದು ಎಷ್ಟು ಬುದ್ಧಿವಾದ ಹೇಳಿದರು ಮಾತು ಕೇಳದ ಕಾರಣ ಗ್ರಾಮದಲ್ಲಿ ತನ್ನ ಮರ್ಯಾದೆ ಹೋಗುತ್ತದೆ ಎಂದು ಹೆತ್ತ ಮಗಳನ್ನೇ ಕೊಲೆ ಮಾಡಿದ ವೆಂಕಟೇಶಗೌಡ.

ಇದನ್ನು ಓದಿ : ಕಾಂಗ್ರೆಸ್​ ಸರ್ಕಾರಕ್ಕೆ 100 ದಿನಗಳ ಸಂಭ್ರಮ: ರಾಜ್ಯದ ಜನತೆಗೆ ಧನ್ಯವಾದ ತಿಳಿಸಿದ ಸಿಎಂ

ಬಳಿಕ ಮಗಳನ್ನು ಕೊಂದು ಯಾರಿಗೂ ಗೊತ್ತಿಲ್ಲದ ರೀತಿಯಲ್ಲಿ ಅಂತ್ಯ ಸಂಸ್ಕಾರ ಮಾಡಿ ಮುಗಿಸಿದ್ದ ಪೋಷಕರು. ಮನೆಯಲ್ಲಿ ಯುವತಿ ಕಾಣದೆ ಇರುವ ಹಿನ್ನೆಲೆ ಗ್ರಾಮದಲ್ಲಿ ಕೊಲೆ ಮಾಡಿರುವ ಕುರಿತು ಗುಸುಗುಸು ಶುರುವಾಗಿತ್ತು. ಇದರಿಂದ ಈ ಘಟನೆ ಬಗ್ಗೆ ಪೋಲಿಸರು ರಮ್ಯಾ ತಂದೆಯನ್ನು ಕರೆದು ವಿಚಾರಣೆ ಮಾಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ವಿಚಾರಣೆ ಬಳಿಕ ಇಂದು ಬೆಳಗ್ಗೆ ತಹಶೀಲ್ದಾರ್ ಹರ್ಷವರ್ಧನ್ ಅವರ ಸಮ್ಮುಖದಲ್ಲಿ ರಮ್ಯಾನ ಮೃತದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದರು. ಈ ಘಟನಾ ಸಂಬಂಧ ಕೋಲಾರ ಗ್ರಾಮಾಂತರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES