Sunday, January 19, 2025

ಇಸ್ರೋ ನಿಯಂತ್ರಣ ಕೇಂದ್ರದತ್ತ ಹೊರಟ ಪ್ರಧಾನಿ ಮೋದಿ!

ಬೆಂಗಳೂರು : ನಮ್ಮ ದೇಶದ ವಿಜ್ಞಾನಿಗಳು ಪ್ರಪಂಚವೇ ಮೆಚ್ಚುವ ಕೆಲಸ ಮಾಡಿದ್ದಾರೆ, ನನ್ನ ಮನಸ್ಸು ವಿಜ್ಞಾನಿಗಳ ಬಳಿ ಹೋಗಲು ಕಾತುರವಾಗಿದೆ, ವಿಜ್ಞಾನಿಗಳು ದೇಶಕ್ಕಾಗಿ ಉತ್ತಮ ಕೊಡುಗೆ ನೀಡಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದರು.

ನಗರದ ಹೆಚ್​ಎಲ್​ ಬಳಿ ಸಾರ್ವಜನಿಕರನ್ನುದ್ದೇಶಿಸಿ ಜೈ ಜವಾನ್​ ಜೈ ವಿಜ್ಞಾನ್​ ಘೋಷಣೆ ಕೂಗುತ್ತಾ ಬೆಂಗಳೂರಿನ ವಿಜ್ಞಾನಿಗಳನ್ನು ಹೊಗಳಿ ಮಾತನಾಡಿದರು. ವಿಜ್ಞಾನಿಗಳನ್ನು ಅಭಿನಂದಿಸಲು ನಾನು ಬಂದಿರುವೇ, ಚಂದ್ರಯಾನ ಸಮಯದಲ್ಲಿ ನಾನು ವಿದೇಶದಲ್ಲಿದ್ದೆ ವಿದೇಶದಿಂದ ನೇರವಾಗಿ ಬೆಂಗಳೂರುಗೆ ಹೋಗಲು ನಿರ್ಧರಿಸಿದ್ದೆ ವಿಜ್ಞಾನಿಗಳ ಸಾಧನೆಯನ್ನು ಇಡೀ ದೇಶವೇ ಮೆಚ್ಚುತ್ತಿದೆ ಎಂದರು.

ಬಳಿಕ ಹೆಚ್​ಎಎಲ್​ ನಿಂದ ನೇರವಾಗಿ ಇಸ್ರೋದ ಕಡೆಗೆ ಮೋದಿ ಪ್ರಯಾಣ ಬೆಳೆಸಿದ್ದು ಮಾರ್ಗ ಮಧ್ಯದಲ್ಲಿ ಜನರತ್ತ ಮೋದಿ ಕೈಬೀಸಿದರು.

RELATED ARTICLES

Related Articles

TRENDING ARTICLES