Monday, December 23, 2024

ಗೃಹಪ್ರವೇಶದ ಊಟ ಸೇವಿಸಿ 30ಕ್ಕೂ ಹೆಚ್ಚು ಜನ ಅಸ್ವಸ್ಥ

ಹಾವೇರಿ : ಗೃಹ ಪ್ರವೇಶಕ್ಕೆ ಹೋಗಿದ್ದ ಜನರು ವಿಷಪೂರಿತ ಆಹಾರ ಸೇವಿಸಿ ಅಸ್ವಸ್ಥಗೊಂಡಿರುವ ಘಟನೆ ರಾಣೆಬೆನ್ನೂರು ತಾಲೂಕಿನ ತಿಮ್ಮನಹಳ್ಳಿ ಗ್ರಾಮದಲ್ಲಿ ನಡೆದಿದೆ.

ನಿನ್ನೆ ಗ್ರಾಮದ ಬಸವರಾಜ್ ಮತ್ತು ಶಾಂತ ಎಂಬುವವರು ಹೊಸದಾಗಿ ಕಟ್ಟಿದ್ದ ಮನೆಯ ಗೃಹ ಪ್ರವೇಶ ಸಮಾರಂಭಕ್ಕೆಂದು ಬಂಧು-ಬಳಗ, ಗ್ರಾಮಸ್ಥರು ಹಾಗೂ ಸ್ನೇಹಿರನ್ನು ಕರೆದು ಆತಿಥ್ಯವನ್ನು ಕೊಟ್ಟಿದ್ದರು. ಈ ವೇಳೆ ಕಾರ್ಯಕ್ರಮದಲ್ಲಿ ಊಟ ಮಾಡಿದ್ದ, ಸುಮಾರು 30 ಕ್ಕೂ ಹೆಚ್ಚು ಜನ ಮತ್ತು ವಿದ್ಯಾರ್ಥಿಗಳು ವಿಷಪೂರಿತ ಆಹಾರವನ್ನು ಸೇವಿಸಿ ಅಸ್ವಸ್ಥರಾಗಿದ್ದಾರೆ.

ಇದನ್ನು ಓದಿ : ಬಾವಿಗೆ ಬಿದ್ದು 3 ವರ್ಷದ ಮಗು ಸಾವು

ಸದ್ಯ ಅಸ್ವಸ್ಥಗೊಂಡ ಜನರನ್ನು ರಾಣೆಬೆನ್ನೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿದೆ. ಈ ಘಟನೆ ಹಲಗೇರಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಈ ದುರ್ಘಟನೆ ನಡೆದು ಹೋಗಿದೆ. 

RELATED ARTICLES

Related Articles

TRENDING ARTICLES