Sunday, December 22, 2024

ಪ್ರಧಾನಿ ಮೋದಿಯನ್ನು ಸ್ವಾಗತಿಸಿದ ಇಸ್ರೋ ಮುಖ್ಯಸ್ಥ ಸೋಮನಾಥ್​

ಬೆಂಗಳೂರು : ಚಂದ್ರಯಾನ ಯಶಸ್ಸಿನ ಹಿನ್ನೆಲೆ ಬೆಂಗಳೂರಿನ ಇಸ್ರೋ ನಿಯಂತ್ರಣ ಕೇಂದ್ರಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿಯವರಿಗೆ ಇಸ್ರೋದ ಮುಖ್ಯಸ್ಥ ಸೋಮನಾಥ್​ ಮತ್ತು ತಂಡ ಹೂಗುಚ್ಚ ನೀಡುವ ಮೂಲಕ ಸ್ವಾಗತ ಕೋರಿದರು.

ನಗರದ ಕಮಾಂಡ್ ಸೆಂಟರ್​ ಬಳಿ ಬಂದಿಳಿದ ಪ್ರಧಾನಿ ಮೋದಿಯವರಗೆ ಇಸ್ರೋ ಮುಖ್ಯಸ್ಥ ಸೋಮನಾಥ್​ ತಂಡ ಚಂದ್ರಯಾನ ಯಶಸ್ಸಿನ ಯಶೋಗಾಥೆಯ ಬಗ್ಗೆ ವಿವರಣೆ ನೀಡಿದರು, ಇದೇ ವೇಳೆ ಪ್ರಧಾನಿ ಮೋದಿ ಯಂತ್ರೋಪಕರಣಗಳ ಮುಂದೆ ನಿಂತು ಕೂಲಂಕುಶವಾಗಿ ಮಾಹಿತಿ ಪಡೆದರು.

ಚಂದ್ರನ ಮೇಲೆ ಇಂದು ಬೆಳಗ್ಗೆ ವಿಕ್ರಮ ಲ್ಯಾಂಡರ್​ ತೆಗೆದ ಚಿತ್ರಗಳನ್ನು ಪ್ರಧಾನಿ ನೆಹರು ಅವರಿಗೆ ತೋರಿಸಿ ಇಸ್ರೋ ಮುಖ್ಯಸ್ಥ ಸೋಮನಾಥ್​ ವಿವರಣೆ ನೀಡಿದರು.

ಈ ವೇಳೆ ಚಂದ್ರಯಾನ ಯಶಸ್ಸಿಗೆ ಕಾರಣರಾದ ಎಲ್ಲಾ ವಿಜ್ಞಾನಿಗಳು ಹಾಜರಿದ್ದರು.

RELATED ARTICLES

Related Articles

TRENDING ARTICLES