ಹಾಸನ : ರಾಜ್ಯದಲ್ಲಿ ಅಧಿಕೃತ ಬಿಪಿಎಲ್ ಕಾರ್ಡ್ಗಳನ್ನು ರದ್ದುಮಾಡುವುದಿಲ್ಲ ಎಂದು ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ಕೆ.ಹೆಚ್ ಮುನಿಯಪ್ಪ ತಿಳಿಸಿದರು.
ಹಾಸನದಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರದ ಅವಧಿಯಲ್ಲಿ ಅರ್ಜಿ ಹಾಕಿದ್ದ 3 ಲಕ್ಷ ಜನರಿಗೆ ಪರಿಶೀಲನೆ ಮಾಡಿ ಅನುಮೋದನೆ ಮಾಡಲು ಸೂಚನೆ ನೀಡಲಾಗಿದೆ. ಇನ್ನು ಮೂರು ತಿಂಗಳಲ್ಲಿ ಎಲ್ಲಾ ಅರ್ಹ ರಿಗೆ ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್ ನೀಡಲಾಗುತ್ತೆ. ಕೆಲವರಿಗೆ ಬ್ಯಾಂಕ್ ಖಾತೆ ಇಲ್ಲದೆ ಕೆಲ ಕಾರ್ಡ್ ರದ್ದಾಗಿತ್ತು ಈ ಬಗ್ಗೆ ಕೂಡ ಕ್ರಮವಹಿಸಲು ಸೂಚನೆ ನೀಡಲಾಗಿದೆ ಎಂದರು.
ಇದನ್ನೂ ಓದಿ: ಮೋದಿ ವೀಕ್ಷಣೆಗೆ ಜನಸಾಮಾನ್ಯರಂತೆ ರಸ್ತೆಪಕ್ಕದಲ್ಲಿ ನಿಂತ ರಾಜ್ಯ ಬಿಜೆಪಿ ನಾಯಕರು!
ನಾಲ್ಕು ಚಕ್ರ ವಾಹನ ಇದ್ದರೆ ಬಿಪಿಎಲ್ ಕಾರ್ಡ್ ರದ್ದು ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಈ ನಿಯಮ ಬಿಜೆಪಿ ಸರ್ಕಾರದ ಅವದಿಯದ್ದು ಸಧ್ಯಕ್ಕೆ ಈ ವಿಚಾರದಲ್ಲಿ ಯಾವುದೆ ತೀರ್ಮಾನ ಇಲ್ಲಾ. 1.28 ಕೋಟಿ ಪಡಿತರ ಕಾರ್ಡ್ ದಾರರಿದಾರೆ ಎಲ್ಲವನ್ನು ಪರಿಶೀಲನೆ ಮಾಡಿ ಎಲ್ಲರಿಗು ಅಕ್ಕಿ ವಿತರಣೆ ಬಗ್ಗೆ ಕ್ರಮ ವಹಿಸುತ್ತೇವೆ. ಯಾರು ಅರ್ಹರಿರ್ತಾರೆ ಅವರಿಗೆ ಯಾವುದೇ ತೊಂದರೆ ಆಗೋದಿಲ್ಲ ಎಂದು ಸಚಿವರ ಭರವಸೆ ನೀಡಿದರು.