Monday, December 23, 2024

ತಿರುವ ಪಡೆಯುತ್ತಿದ್ದ Tata ace ವಾಹನಕ್ಕೆ ದ್ವಿಚಕ್ರ ವಾಹನ ಡಿಕ್ಕಿ

ಆನೇಕಲ್ : ತಿರುವು ಪಡೆಯುತ್ತಿದ್ದ ವೇಳೆ ಟಾಟಾ ಎಸಿ ವಾಹನಕ್ಕೆ ದ್ವಿಚಕ್ರ ವಾಹನ ಒಂದು ಡಿಕ್ಕಿ ಹೊಡೆದಿರುವ ಘಟನೆ ರಾಮಕೃಷ್ಣಾಪುರ ಪೆಟ್ರೋಲ್ ಬಂಕ್ ಬಳಿ ನಡೆದಿದೆ.

ನಿನ್ನ ಸಂಜೆ ಸುಮಾರು 7 ಗಂಟೆ ಸಮಯದಲ್ಲಿ ಟಾಟಾ ಎಸಿಯೊಂದು ಸಿಗ್ನಲ್ ಹಾಕಿ ತಿರುವುಪಡೆಯುತ್ತಿದ್ದ ವೇಳೆ ಆನೇಕಲ್​ನಿಂದ ಬರ್ತಿದ್ದ ದ್ವಿಚಕ್ರ ವಾಹನದ ಬೈಕ್ ಸವಾರ ಅತಿ ವೇಗದಲ್ಲಿ ಬಂದ ಪರಿಣಾಮ ಟಾಟಾ ಎಸಿಗೆ ಡಿಕ್ಕಿ ಹೊಡೆದಿದ್ದಾನೆ.

ಇದನ್ನು ಓದಿ : ಗೃಹಪ್ರವೇಶದ ಊಟ ಸೇವಿಸಿ 30ಕ್ಕೂ ಹೆಚ್ಚು ಜನ ಅಸ್ವಸ್ಥ

ಘಟನಾ ಪರಿಣಾಮ ಬೈಕ್ ಸವಾರನಿಗೆ ಎರಡು ಕಾಲು ಗಂಭೀರ ಗಾಯಗೊಂಡಿದೆ. ಸೂರ್ಯ ನಗರ ಪೊಲೀಸ್ ಠಾಣಾ ರಾಮಕೃಷ್ಣಾಪುರ ವ್ಯಾಪ್ತಿಯಲ್ಲಿ ನಡೆದಿದ್ದು, ಬಳಿಕ ಅಲ್ಲೇ ಇದ್ದ ಸ್ಥಳೀಯರು ಸೂರ್ಯ ನಗರ ಪೋಲಿಸರಿಗೆ ಮಾಹಿತಿ ನೀಡಿ, ಸದ್ಯ ಗಾಯಳು ವ್ಯಕ್ತಿಯನ್ನು ಆಸ್ಪತ್ರೆಗೆ ರವಾನಿಸಿದರು.

RELATED ARTICLES

Related Articles

TRENDING ARTICLES