Monday, December 23, 2024

ನಿಯಮ ಪಾಲಿಸದ ಕೊಹ್ಲಿಗೆ ಬಿಸಿಸಿಐ ವಾರ್ನಿಂಗ್

ಬೆಂಗಳೂರು : ಟೀಂ ಇಂಡಿಯಾ ರನ್ ಮೆಷಿನ್ ವಿರಾಟ್ ಕೊಹ್ಲಿ ಬಿಸಿಸಿಐ ನಿಯಮ ಮುರಿದಿದ್ದು, ಖಡಕ್ ವಾರ್ನಿಂಗ್ ನೀಡಲಾಗಿದೆ.

ಏಷ್ಯಾಕಪ್​ ಹಿನ್ನೆಲೆಯಲ್ಲಿ ಟೀಂ ಇಂಡಿಯಾ ಆಟಗಾರರು ಬೆಂಗಳೂರಿನ ಎನ್​ಸಿಎಯಲ್ಲಿ ಅಭ್ಯಾಸ ಆರಂಭಿಸಿದ್ದಾರೆ.

ಬಹಳ ಕಾಲದಿಂದ (ಸಮಯದಿಂದ) ತಂಡದಿಂದ ಹೊರಗುಳಿದ ಆಟಗಾರರನ್ನು ಬಿಸಿಸಿಐ ಯೋ ಯೋ ಟೆಸ್ಟ್​ಗೆ ಒಳಪಡಿಸುತ್ತಿದೆ. ಆದರೆ, ಯೋ ಯೋ ಟೆಸ್ಟ್​ಗೆ ಒಳಗಾದ ಸ್ಟಾರ್ ಬ್ಯಾಟರ್​ ಕೊಹ್ಲಿ ಮಹಾ ಎಡವಟ್ಟು ಮಾಡಿಕೊಂಡಿದ್ದಾರೆ.

ಕೊಹ್ಲಿ ಅವರು ತಮ್ಮ ಫಿಟ್​ನೆಸ್​ ಮಾರ್ಕ್ಸ್​ಗಳನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ಬಿಸಿಸಿಐ ಖಡಕ್​ ವಾರ್ನಿಂಗ್ ನೀಡಿದೆ. ಯಾವುದೇ ಆಟಗಾರರೂ ತಮ್ಮ ಫಿಟ್​ನೆಸ್​ ಮಾರ್ಕ್ಸ್​ಗಳನ್ನು ಸೋಶಿಯಲ್​ ಮೀಡಿಯಾಗಳಲ್ಲಿ ಹಂಚಿಕೊಳ್ಳುವಂತಿಲ್ಲ ಎಂದು ಸೂಚಿಸಿದೆ.

RELATED ARTICLES

Related Articles

TRENDING ARTICLES