Wednesday, January 22, 2025

ಆ.27ರಂದು ‘ನಮ್ಮ ಮೆಟ್ರೋ’ ಸ್ಥಗಿತ!

ಬೆಂಗಳೂರು : ಆಗಸ್ಟ್​ 27ರಂದು ನಮ್ಮ ಮೆಟ್ರೋದ ಸೇಫ್ಟಿ ಟೆಸ್ಟ್​ (ಸುರಕ್ಷತಾ ಪರೀಕ್ಷೆ ) ನಡೆಯಲಿರುವ ಹಿನ್ನೆಲೆಯಲ್ಲಿ ನೇರಳೆ ಮಾರ್ಗ ಸಂಚಾರ ವ್ಯತ್ಯಯವಾಗಲಿದೆ.

ಕೆಂಗೇರಿ-ಚೆಲ್ಲಘಟ್ಟ ಮಾರ್ಗದ ಸುರಕ್ಷತಾ ಪರೀಕ್ಷೆ ನಡೆಯಲಿದೆ. ಹೀಗಾಗಿ, ಅಂದು ಬೆಳಗ್ಗೆ 7 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ನೇರಳೆ ಮಾರ್ಗದಲ್ಲಿ ಸಂಚಾರ ವ್ಯತ್ಯಯವಾಗಲಿದೆ.

ಮೈಸೂರು ರಸ್ತೆ-ಕೆಂಗೇರಿ, ಬೈಯಪ್ಪನಹಳ್ಳಿ-ಸ್ವಾಮಿ ವಿವೇಕಾನಂದ, ವೈಟ್​ ಫೀಲ್ಡ್-ಕೆ.ಆರ್ ಪುರ ಹಾಗೂ ಕೆ.ಆರ್ ಪುರ-ಬೈಯಪ್ಪನಹಳ್ಳಿ ನಿಲ್ದಾಣಗಲ ನಡುವೆ ಮೆಟ್ರೋ ಸಂಚಾರ ಸ್ಥಗಿತಗೊಳ್ಳಲಿದೆ. ಮಧ್ಯಾಹ್ನ 1 ಗಂಟೆ ಬಳಿಕ ಪೂರ್ಣ ಪ್ರಮಾಣದ ಸಂಚಾರ ಆರಂಭವಾಗಲಿದೆ.

RELATED ARTICLES

Related Articles

TRENDING ARTICLES