Friday, May 17, 2024

ಬುದ್ದಿ ಹೇಳಿದ ಉಪನ್ಯಾಸಕರಿಗೆ ಲಾಂಗ್ ತೋರಿಸಿ ಬೆದರಿಕೆ ಹಾಕಿದ ವಿದ್ಯಾರ್ಥಿ!

ಮಂಡ್ಯ : ನಿಮ್ಮ ಮಗ ತರಗತಿಗೆ ಸರಿಯಾಗಿ ಹಾಜರಾಗುತ್ತಿಲ್ಲ ಎಂದು ವಿದ್ಯಾರ್ಥಿ ಪೋಷಕರಿಗೆ ಮಾಹಿತಿ ನೀಡಿದ ಎಂಬ ಕಾರಣಕ್ಕೆ ಉಪನ್ಯಾಸಕರಿಗೆ ಲಾಂಗ್​ ತೋರಿಸಿ ಬೆದರಿಕೆ ಹಾಕಿದ ಘಟನೆ  ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಬಿ.ಜಿ.ನಗರದ ಡಿಪ್ಲೊಮಾ ಕಾಲೇಜಿನಲ್ಲಿ ನಡೆದಿದೆ.

ತುಮಕೂರುಜಿಲ್ಲೆ, ಕುಣಿಗಲ್‌  ಮೂಲದ ಉದಯ್‌ ಗೌಡ (17) ಲಾಂಗ್​​ ತೋರಿಸಿದ ವಿದ್ಯಾರ್ಥಿ, ಬಿ.ಜಿ.ನಗರದ ಡಿಪ್ಲೊಮಾ ಕಾಲೇಜಿನಲ್ಲಿ ಪ್ರಥಮ ವರ್ಷದ ಡಿಪ್ಲೊಮಾ ತರಗತಿ ಯಲ್ಲಿ ಓದುತ್ತಿದ್ದಾನೆ. ಈ ಕಾಲೇಜಿನಲ್ಲಿ ಉಪನ್ಯಾಸಕರಾಗಿರುವ ಚಂದನ್​ ಎಂಬುವರು, ನಿಮ್ಮ ಮಗ ಉದ‌ಗೌಡ ತರಗತಿಗೆ ಸರಿಯಾಗಿ ಬರುತ್ತಿಲ್ಲ, ಜೊತೆಗೆ ಆತನ ವರ್ತನೆಯೂ ಸರಿಯಿಲ್ಲ, ಆತನಿಗೆ ಬುದ್ದಿ ಹೇಳಿ ಎಂದು ಆತನ ಪೋಷಕರಿಗೆ ಮಾಹತಿ ನೀಡಿದ್ದರು.

ಇದನ್ನೂ ಓದಿ: ಚಂದ್ರಯಾನ-3 : ಫಸ್ಟ್ ವಿಡಿಯೋ ಬಿಡುಗಡೆ

ಇದರಿಂದ ಆಕ್ರೋಶಗೊಂಡ ಉದಯ್‌ ಗೌಡ, ಮರುದಿನ ಮಾಸ್ಕ್​ ಧರಿಸಿ ಉಪನ್ಯಾಸಕರಿದ್ದ ಕೊಠಡಿಗೆ ಬಂದು , ಲಾಂಗ್ ಹಿಡಿದು, ನನ್ನ ವಿಚಾರಕ್ಕೆ ಬಂದರೇ ತಕ್ಕ ಪಾಠ ಕಲಿಸುವುದಾಗಿ ಬೆದರಿಕೆ ಹಾಕಿದ್ದಾನೆ. ತಕ್ಷಣ ಇತರೆ ಉಪನ್ಯಾಸಕರು ಪೊಲೀಸರಿಗೆ ಮಾಹಿತಿ ನೀಡಿದರು.

ಸ್ಥಳಕ್ಕೆ ಬಂದ ಪೊಲೀಸರು ಲಾಂಗ್, ಬೈಕ್‌ ವಶಪಡಿಸಿಕೊಂಡು ಆತನನ್ನು ಠಾಣೆಗೆ ಕರೆದೊಯ್ದರು. ನಂತರ ತಂದೆ-ತಾಯಿಯ ಸಮ್ಮುಖದಲ್ಲಿ ಆತನಿಗೆ ಬುದ್ಧಿ ಮಾತು ಹೇಳಿ ಠಾಣೆಯಿಂದ ಕಳಿಸಿಕೊಡಲಾಗಿದೆ. ಪೋಷಕರು ಮತ್ತು ಪೊಲೀಸರೆದುರು ತಾನು ಇನ್ನು ಮುಂದೆ ಇಂತಹ ತಪ್ಪನ್ನು ಮಾಡುವುದಿಲ್ಲ. ಎಂದು ಪ್ರಮಾಣ ಮಾಡಿದ್ದಾನೆಂದು ತಿಳಿದು ಬಂದಿದೆ.

RELATED ARTICLES

Related Articles

TRENDING ARTICLES