Wednesday, December 18, 2024

ಕಾಂಗ್ರೆಸ್ ಶಾಸಕನ ಅಶ್ಲೀಲ ವಿಡಿಯೋ ವೈರಲ್

ಬೆಂಗಳೂರು : ಮಧ್ಯಪ್ರದೇಶ ಚುನಾವಣೆ ಸಮೀಪದಲ್ಲೇ ಕಾಂಗ್ರೆಸ್​ ಶಾಸಕನ ಅಶ್ಲೀಲ ವಿಡಿಯೋ ಒಂದು ವೈರಲ್​ ಆಗಿದೆ. ಇದು ರಾಜಕೀಯ ಸಂಚಲನಕ್ಕೆ ಕಾರಣವಾಗಿದೆ.

ಶಾಸಕ ಸುರೇಶ್ ರಾಜೆ ಅವರು ಖಾಸಗಿ ಹೋಟೆಲ್​ವೊಂದರ ರೂಮ್​ನಲ್ಲಿ ಪುರುಷನೊಂದಿಗೆ ಅಸಭ್ಯ ರೀತಿಯಲ್ಲಿರುವ ವಿಡಿಯೋ ಸೆರೆಯಾಗಿದೆ.

ವಿಡಿಯೋದಲ್ಲಿರುವ ವ್ಯಕ್ತಿಯು ಶಾಸಕ ಸುರೇಶ್​ ರಾಜೆಗೆ, ‘ಸರ್​.. ನನ್ನನ್ನು ಶಾಶ್ವತವಾಗಿ ನಿಮ್ಮವನನ್ನಾಗಿ ಮಾಡಿಕೊಳ್ಳಿ’ ಎಂದಿರುವುದು ರೆಕಾರ್ಡ್​ ಆಗಿದೆ. ಶಾಸಕರ ವರ್ತನೆ ಕಾಂಗ್ರೆಸ್​ಗೆ ಭಾರಿ ಮುಜುಗರ ತಂದಿದೆ. ಅಲ್ಲದೇ, ಈ ವಿಡಿಯೋದಿಂದ ಭಾರಿ ಹೊಡೆತ ಬೀಳಲಿದೆ ಎನ್ನಲಾಗಿದೆ.

ಕಾಂಗ್ರೆಸ್ ಸಂಸ್ಕೃತಿಯ ಭಾಗ

ಶಾಸಕ ಸುರೇಜ್​ ರಾಜೆ ಅವರು 2020ರ ಉಪಚುನಾವಣೆಯಲ್ಲಿ ದಬ್ರಾ ಕ್ಷೇತ್ರದಿಂದ ಜ್ಯೋತಿರಾದಿತ್ಯ ಸಿಂಧಿಯಾ ಅವರ ಆಪ್ತೆ ಇಮ್ರಾತಿ ದೇವಿ ಅವರನ್ನು ಸೋಲಿಸಿದ್ದರು. ಬಳಿಕ, ಸುರೇಶ್ ರಾಜೆ ಬಿಜೆಪಿ ಪಕ್ಷವನ್ನು ಬಿಟ್ಟು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದರು.

ಸುಮಾರು 2 ನಿಮಿಷಕ್ಕೂ ಹೆಚ್ಚು ಅವಧಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ವಿಡಿಯೋ ಸಂಬಂಧ ಬಿಜೆಪಿ ಕಿಡಿಕಾರಿದ್ದು, ಇದು ಕಾಂಗ್ರೆಸ್ ಸಂಸ್ಕೃತಿಯ ಭಾಗವಾಗಿದೆ ಎಂದು ಆಕ್ರೋಶ ಹೊರಹಾಕಿದೆ.

RELATED ARTICLES

Related Articles

TRENDING ARTICLES