Sunday, December 22, 2024

ಕರಾಳ ದಿನ! : ದುಡುಕಿದ ತಾಯಿ.. ಮೂವರು ಮಕ್ಕಳು ಸಾವು

ಬಾಗಲಕೋಟೆ : ವರಮಹಾಲಕ್ಷ್ಮೀ ಬಾಗಲಕೋಟೆ ಮಂದಿಗೆ ಕರಾಳ ದಿನವಾಗಿದೆ. ಕೌಟುಂಬಿಕ ಕಲಹ ಹಿನ್ನೆಲೆ ತಾಯಿಯೊಬ್ಬಳು ಮೂವರು ಮಕ್ಕಳೊಂದಿಗೆ ಬಾವಿಗೆ ಹಾರಿರುವ ದಾರುಣ ಘಟನೆ ಬಾಗಲಕೋಟೆ ಜಿಲ್ಲೆಯ ಕುಂಬಾರಹಳ್ಳ ಗ್ರಾಮದಲ್ಲಿ ನಡೆದಿದೆ.

ಸೌಜನ್ಯ(15 ದಿನದ ಹೆಣ್ಣು ಶಿಶು), ಶ್ರಾವಣಿ(4) ಹಾಗೂ ಶ್ರೀಶೈಲ್(6) ಮೃತ ಮಕ್ಕಳು ಎಂದು ತಿಳಿದುಬಂದಿದೆ. ದುರಂತದಲ್ಲಿ ತಾಯಿ ಸಂಗೀತಾ ಗುಡೆಪ್ಪಗೋಳ (28) ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮನೆಯಲ್ಲಿ ಆಗಾಗ್ಗೆ ಜಗಳ ನಡೆಯುತ್ತಿತ್ತು. ಇದರಿಂದ ಬೇಸತ್ತ ಸಂಗೀತಾ ಇಂದು ತೋಟದ ಮನೆ ಬಳಿಯ ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಜಮಖಂಡಿ ಗ್ರಾಮೀಣ ಪೊಲೀಸ್ ಠಾಣೆಯ ಪಿ.ಎಸ್.ಐ ಮಹೇಶ ಸಂಖ, ಸಿಪಿಐ ಮಲ್ಲಪ್ಪ‌ ಮಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕಾರ್ಯಚರಣೆಯ ಮೂಲಕ ಬಾವಿಯಿಂದ ಮಕ್ಕಳ ಶವ ಹೊರ ತೆಗೆಯಲಾಗಿದೆ. ಈ ಸಂಬಂಧ ಜಮಖಂಡಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES