Wednesday, January 22, 2025

ಕನ್ನಡಿಗನ ಪರಾಕ್ರಮ.. 57 ಎಸೆತಗಳಲ್ಲಿ ಸೆಂಚುರಿ

ಬೆಂಗಳೂರು : ಟೀಂ ಇಂಡಿಯಾ ಬ್ಯಾಟರ್ ಕನ್ನಡಿಗ ಮಯಾಂಕ್ ಅಗರ್ವಾಲ್​ ಮಹಾರಾಜ ಟ್ರೋಫಿ-2023ರಲ್ಲಿ ಬೊಂಬಾಟ್ ಸೆಂಚುರಿ ಸಿಡಿಸಿದ್ದಾರೆ.

ಕಲ್ಯಾಣಿ ಬೆಂಗಳೂರು ಬ್ಲಾಸ್ಟರ್ಸ್​ ತಂಡದ ನಾಯಕ ಮಯಾಂಕ್ ಅಗರ್ವಾಲ್, ಮೈಸೂರು ವಾರಿಯರ್ಸ್​ ವಿರುದ್ಧ ಕೇವಲ 57 ಎಸೆತಗಳಲ್ಲಿ 6 ಭರ್ಜರಿ ಸಿಕ್ಸರ್ ಹಾಗೂ 9 ಬೌಂಡರಿಗಳೊಂದಿಗೆ 105 ರನ್​ ಬಾರಿಸಿದ್ದಾರೆ.

ಕ್ರಿಕೆಟ್​ ಪ್ರೇಕ್ಷಕರು ಕನ್ನಡಿಗ ಮಯಾಂಕ್ ಅದ್ಭುತ ಇನ್ನಿಂಗ್ಸ್​ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಕಮೆಂಟ್ ಮಾಡಿ, ಟೀಂ ಇಂಡಿಯಾ ಪರವಾಗಿಯೂ ಇದೇ ಪ್ರದರ್ಶನ ನೀಡುವಂತೆ ಕೋರುತ್ತಿದ್ದಾರೆ.

ಇನ್ನೂ, ಮುಂಬರುವ ಏಷ್ಯಾಕಪ್​ಗಾಗಿ ಬಿಸಿಸಿಐ ಟೀಂ ಇಂಡಿಯಾ ತಂಡವನ್ನು ಪ್ರಕಟಿಸಿದ್ದು ಕನ್ನಡಿಗ ಕೆ.ಎಲ್ ರಾಹುಲ್ ಅವಕಾಶ ಪಡೆದಿದ್ದಾರೆ. ಮಯಾಂಕ್ ಅಗರ್ವಾಲ್​ಗೆ ಆಯ್ಕೆ ಸಮಿತಿ ಮಣೆ ಹಾಕಿಲ್ಲ.

RELATED ARTICLES

Related Articles

TRENDING ARTICLES