Sunday, December 22, 2024

ಇಸ್ರೋ ಅಧ್ಯಕ್ಷರನ್ನು ಸನ್ಮಾನಿಸಿದ ರಾಜ್ಯಪಾಲರು

ಬೆಂಗಳೂರು : ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಇಸ್ರೋಗೆ ಭೇಟಿ ನೀಡಿ, ಅಧ್ಯಕ್ಷ ಎಸ್. ಸೋಮನಾಥ್ ಮತ್ತು ಅವರ ತಂಡದ ಮುಖ್ಯ ಸದಸ್ಯರನ್ನು ಸನ್ಮಾನಿಸಿದರು.

ಅಧ್ಯಕ್ಷ ಎಸ್. ಸೋಮನಾಥ್ ಮತ್ತು ಅವರ ತಂಡವನ್ನು ಬಾಹ್ಯಾಕಾಶ ಪರಿಶೋಧನೆ ಮತ್ತು ಸಂಶೋಧನೆಯನ್ನು ಮುಂದುವರಿಸುವ ನಿರಂತರ ಅನ್ವೇಷಣೆಗಾಗಿ ಹಾಗೂ ಅವರ ಅಚಲ ಬದ್ಧತೆಯು ರಾಷ್ಟ್ರಕ್ಕೆ ಹೆಮ್ಮೆ ತಂದಿದೆ ಮಾತ್ರವಲ್ಲದೆ ಜಾಗತಿಕ ಬಾಹ್ಯಾಕಾಶ ವೇದಿಕೆಯಲ್ಲಿ ಭಾರತದ ಪರಾಕ್ರಮವನ್ನು ಪ್ರದರ್ಶಿಸುತ್ತದೆ ಎಂದು ಶ್ಲಾಘಿಸಿದರು.

ಈ ತಂಡದ ನಿರಂತರ ಪ್ರಯತ್ನಗಳು ಭವಿಷ್ಯದ ಪೀಳಿಗೆಗೆ ಸ್ಫೂರ್ತಿ ನೀಡಲಿ ಮತ್ತು ಬಾಹ್ಯಾಕಾಶ ವಿಜ್ಞಾನ ಕ್ಷೇತ್ರದಲ್ಲಿ ಭಾರತದ ಸ್ಥಾನಮಾನವನ್ನು ಹೆಚ್ಚಿಸುವ ಪ್ರಯತ್ನ ಮುಂದುವರೆಯಲಿದೆ ರಾಜ್ಯಪಾಲರು ವಿಶ್ವಾಸ ವ್ಯಕ್ತಪಡಿಸಿದರು.

ಮೋದಿ ಅವರು ಬರಲಿ

ನಾಳೆ ಬೆಂಗಳೂರಿನ ಇಸ್ರೋ ಕಚೇರಿಗೆ ಪ್ರಧಾನಿ ಮೋದಿ ಭೇಟಿ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ಪ್ರಧಾನಿ ಮೋದಿ ಅವರು ಬರಲಿ. ನಮ್ಮದೇನು ವಿರೋಧ ಇಲ್ಲ. ಅವರು ರೋಡ್ ಶೋ ಆದರು ಮಾಡಲಿ, ಪಬ್ಲಿಕ್ ಮೀಟಿಂಗ್ ಆದರೂ ಮಾಡಲಿ ನಮಗೇನು ಅಭ್ಯಂತರ ಇಲ್ಲ ಎಂದು ಹೇಳಿದ್ದಾರೆ.

RELATED ARTICLES

Related Articles

TRENDING ARTICLES