Wednesday, January 22, 2025

2ನೇ ಮಗುವಿನ ಆಗಮನದ ಖುಷಿ ಹಂಚಿಕೊಂಡ ಧ್ರುವ ಸರ್ಜಾ

ಬೆಂಗಳೂರು : ಸ್ಯಾಂಡಲ್​ವುಡ್ ಆಕ್ಷನ್​ ಪ್ರಿನ್ಸ್ ಧ್ರುವ ಸರ್ಜಾ ಅವರ ಕುಟುಂಬದಲ್ಲಿ ವರಮಹಾಲಕ್ಷ್ಮೀ ಹಬ್ಬದ ಸಂಭ್ರಮ ಡಬಲ್​ ಆಗಿದೆ.

ನಟ ಧ್ರುವ ಸರ್ಜಾ ದಂಪತಿ ವಿಶೇಷ ವಿಡಿಯೋ ಮೂಲಕ ಎರಡನೇ ಮಗುವಿನ ಆಗಮನದ ಖುಷಿ ಹಂಚಿಕೊಂಡಿದ್ದಾರೆ. ತಮ್ಮ ಕುಟುಂಬಕ್ಕೆ ಇನ್ನೊಂದು ಜೀವ ಆಗಮಿಸುತ್ತಿದೆ ಎಂದು ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್​ ಮಾಡಿದ್ದಾರೆ.

ಸಣ್ಣ ವಿಡಿಯೋ ಮೂಲಕ ಪತ್ನಿ ಹಾಗೂ ಮಗಳೊಂದಿಗೆ ಧ್ರುವ ಸರ್ಜಾ ಈ ಗುಡ್​ ನ್ಯೂಸ್​ ಅನ್ನು ಅಭಿಮಾನಿಗಳಿಗೆ ಹಂಚಿದ್ದಾರೆ. ಸೆಪ್ಟಂಬರ್​ನಲ್ಲಿ ಪತ್ನಿ ಪ್ರೇರಣಾ ಸರ್ಜಾ ಅವರು ಎರಡನೇ ಮಗುವಿಗೆ ಜನ್ಮ ನೀಡಲಿದ್ದಾರೆ.

ಎ.ಪಿ ಅರ್ಜುನ್ ನಿರ್ದೇಶನದ ಅದ್ದೂರಿ ಚಿತ್ರದ ಮೂಲಕ ಸ್ಯಾಂಡಲ್​ವುಡ್​ಗೆ ಅದ್ದೂರಿ ಎಂಟ್ರಿ ಕೊಟ್ಟ ಧ್ರುವ ಸರ್ಜಾ ಇದೀಗ ಕನ್ನಡಿಗ ದಿಲ್ ಕದ್ದಿದ್ದಾರೆ. ಸದ್ಯ ಅದ್ದೂರಿ ನಿರ್ದೇಶಕ ಎ.ಪಿ ಅರ್ಜುನ್ ನಿರ್ದೇಶನದ ಮಾರ್ಟಿನ್ ಹಾಗೂ ಜೋಗಿ ಪ್ರೇಮ್ ನಿರ್ದೇಶನದ ಕೆಡಿ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ.

RELATED ARTICLES

Related Articles

TRENDING ARTICLES