Monday, December 23, 2024

ಪೌರಕಾರ್ಮಿಕರು ನಿಜವಾದ ಮಹಾಲಕ್ಷ್ಮೀಯರು : ಡಾ.ಟಿ.ಎ. ಶರವಣ

ಬೆಂಗಳೂರು : ಇಂದು ರಾಜಧಾನಿಯಲ್ಲಿ ವರಮಹಾಲಕ್ಷ್ಮಿ ಹಬ್ಬದ ವಾತಾವರಣ ಮನೆ ಮಾಡಿತ್ತು. ಆದರೆ, ಜೆಡಿಎಸ್ ಎಂಎಲ್​ಸಿ ಡಾ.ಟಿ.ಎ. ಶರವಣ ಅವರ ಮನೆಯಲ್ಲಿ ಡಬಲ್ ಸಂಭ್ರಮ ಮನೆಮಾಡಿತ್ತು.

ಒಂದು ವರಮಹಾಲಕ್ಷ್ಮೀ ಹಬ್ಬ ಆಚರಣೆ. ಮತ್ತೊಂದು ಶರವಣ ಅವರ ಹುಟ್ಟು ಹಬ್ಬ. ಬಿಬಿಎಂಪಿ ಮಹಿಳಾ ಪೌರಕಾರ್ಮಿಕರಿಗೆ ಬಾಗಿನ ನೀಡಿವ ಮೂಲಕ ಶರವಣ ಅವರು ಅರ್ಥಪೂರ್ಣವಾಗಿ ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿದ್ದಾರೆ.

ಈ ವೇಳೆ ಪವರ್ ಟಿವಿಯೊಂದಿಗೆ ಮಾತನಾಡಿದ ಡಾ.ಟಿ.ಎ. ಶರವಣ ಅವರು, ಸಮಾಜದಲ್ಲಿ ಎಲ್ಲವನ್ನು ಸ್ವಚ್ಚವಾಗಿ ಇಟ್ಟುಕೊಳ್ಳುವವರು ಪೌರಕಾರ್ಮಿಕರು ನಿಜವಾದ ಮಹಾಲಕ್ಷ್ಮೀ. ಪೌರಕಾರ್ಮಿಕರು, ಮಹಾಲಕ್ಷ್ಮೀಯರನ್ನ ಇಂದು ಮನೆಗೆ ಬರಮಾಡಿಕೊಂಡಿದ್ದೀನಿ. ಇವತ್ತು ಬೆಳಗ್ಗೆ 4 ಗಂಟೆಗೆ ದೇವಿಯ ಪೂಜೆ ನೆರವೇರಿಸಿದ್ದೇವೆ. ಪೌರಕಾರ್ಮಿಕರ ಜೊತೆಯಲ್ಲಿ ವರಮಹಾಲಕ್ಷ್ಮೀ ಹಬ್ಬ ಹಾಗೂ ನನ್ನ ಹುಟ್ಟು ಹಬ್ಬವನ್ನ ಸರಳತೆಯಿಂದ ಆಚರಿಸಿಕೊಂಡಿದ್ದೀನಿ ಎಂದು ಹೇಳಿದರು.

HDD-HDK ಆರೋಗ್ಯಕ್ಕೆ ಪ್ರಾರ್ಥನೆ

ನಮ್ಮ‌ಪಕ್ಷದ ವರಿಷ್ಠರಾದ ಹೆಚ್.ಡಿ. ದೇವೇಗೌಡರರಿಗೆ ದೇವರು ಆರೋಗ್ಯ ಕೊಟ್ಟು, ಇನ್ನು ಹೆಚ್ಚಿನ ರೀತಿಯಲ್ಲಿ ದೇಶ ಹಾಗೂ ರಾಜ್ಯ ಸೇವೆ ಮಾಡಲಿ. ರಾಜ್ಯದ ಜನರ ಸೇವೆ ಮಾಡಲು ಹೆಚ್​.ಡಿ ಕುಮಾರಸ್ವಾಮಿ ಅವರಿಗೆ ಆರೋಗ್ಯ ನೀಡಲಿ ಎಂದು ಪ್ರಾರ್ಥನೆ ಮಾಡಿದ್ದೇನೆ ಎಂದು ತಿಳಿಸಿದರು.

ಚಂದ್ರಯಾನ-3 ಯಶಸ್ಸಿಗೆ ಶ್ರಮಿಸಿದ ವಿಜ್ಞಾನಿಗಳಿಗೆ ಅಭಿನಂದನೆಗಳು. ಇವತ್ತು ನಮ್ಮ ಕನ್ನಡ ನಾಡಿನಲ್ಲಿ ಚಂದ್ರಯಾನ-3 ನಡೆದಿರೋದು ವಿಶೇಷ ಎಂದು ಶರವಣ ಹೇಳಿದರು.

RELATED ARTICLES

Related Articles

TRENDING ARTICLES