ಬೆಂಗಳೂರು : ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬೆಂಗಳೂರಿಗೆ ಮಾತ್ರ ಒತ್ತು ನೀಡುತ್ತಿರುವ ಕುರಿತು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಪ್ರತಿಕ್ರಿಯಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರು ಹಾಲು ಕರೆಯುವ ದನ ಎಂದು ಆರೋಪಿಸಿ ಡಿ.ಕೆ. ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಬೇರೆ ಯಾವ ಅಭಿವೃದ್ಧಿ ಕೆಲಸವೂ ನಡೆಯುತ್ತಿಲ್ಲ. ಈಶಾನ್ಯ ರಾಜ್ಯದ ಪುಟ್ಟ ಅಂಗಡಿಗಳಿಂದ ನಿಯೋಗ ಬಂದಿತ್ತು. ಅಲ್ಲಿಯವರಿಂದಲೂ ಬಿಬಿಎಂಪಿ(BBMP)ಯವರು ಮಾಸಿಕ 15 ಸಾವಿರ ರೂಪಾಯಿ ಕೇಳುತ್ತಿದ್ದಾರೆ. ಬೆಂಗಳೂರು ಬಿಡಬೇಕಾಗುತ್ತದೆ ಎನ್ನುತ್ತಿದ್ದಾರೆ. ಯಾವ ಅಧಿಕಾರಿಗಳೂ ಸಮಾಧಾನದಲ್ಲಿಲ್ಲ. ವರ್ಗಾವಣೆಯಾದ ಅಧಿಕಾರಿಗಳಿಗೆ ಸ್ಥಳ ನೀಡಿಲ್ಲ. ಐಎಎಸ್(IAS), ಐಪಿಎಸ್(IPS) ಅಧಿಕಾರಿಗಳಿಗೆ ಈ ರೀತಿ ಆಗಿದೆ. ಇದು ಈಗಿನ ಕರ್ನಾಟಕದ ಸ್ಥಿತಿ ಎಂದು ಕಿಡಿಕಾರಿದ್ದಾರೆ.
ಸದ್ಯದಲ್ಲೇ ಗ್ರಾ.ಪಂಗಳಲ್ಲಿ BLAಗಳ ನೇಮಕ
ಸದ್ಯದಲ್ಲೇ ಎಲ್ಲಾ ಗ್ರಾಮಗಳಲ್ಲಿ ಬೂತ್ ಲೆವೆಲ್ ಏಜೆಂಟ್ಗಳನ್ನು ನೇಮಕ ಮಾಡಲಿದ್ದೇವೆ. ಅವರಿಗೆ ಅಗತ್ಯ ಕಾರ್ಯಾಗಾರ ನಡೆಯುತ್ತದೆ ಎಂದು ಹೇಳಿದ್ದಾರೆ.
ಲೋಕಸಭಾ ಚುನಾವಣೆ ಹಿನ್ನೆಲೆ ಸೆಪ್ಟೆಂಬರ್ 1ರಿಂದ 10ರವರೆಗೆ ರಾಜ್ಯದಲ್ಲಿ ಅಭಿಯಾನ ನಡೆಯಲಿದೆ. ಹೊಸ ಹೆಸರು ಸೇರ್ಪಡೆ, ಡಿಲೀಟ್ ಸೇರಿ ಅನೇಕ ಕಾರ್ಯ ನಡೆಸಲಾಗುತ್ತೆ. ನನ್ನ ದೇಶ- ನನ್ನ ಮತ ಘೋಷಣೆ ಮಾಡಿದ್ದೇವೆ. ದೇಶದ ಜನರ ಸಹಕಾರ ಇದಕ್ಕೆ ಬೇಕಾಗಿದೆ. ಪ್ರಧಾನಿ ನರೇಂದ್ರ ಮೋದಿಯವರಿಗೆ ಶಕ್ತಿ ತುಂಬಬೇಕು ಎಂದರೆ ಎಲ್ಲರೂ ಮತದಾನ ಮಾಡಬೇಕು ಎಂದು ತಿಳಿಸಿದ್ದಾರೆ.