Sunday, December 22, 2024

ಡಿಕೆಶಿ ಬಳಿ 1,416 ಕೋಟಿ ಇದ್ಯಂತೆ, ಹಂಚೋಕೆ ಹೇಳಿ : ಯತ್ನಾಳ್ ಟಾಂಗ್

ವಿಜಯಪುರ : ಅಂಬಾನಿ-ಅದಾನಿ ಜೇಬಿನಲ್ಲಿ ಹಣ ಇದ್ದರೆ ಆರ್ಥಿಕತೆ ಬೆಳವಣಿಗೆಯಾಗಲ್ಲ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿರುಗೇಟು ಕೊಟ್ಟಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ನಿಮ್ಮ ಡಿಕೆಶಿ ಬಳಿ 1,416 ಕೋಟಿ ಇದೆಯಂತೆ, ದಯವಿಟ್ಟು ಬಡವರಿಗೆ ಹಂಚುವುದಕ್ಕೆ ಹೇಳಿ. ಕೇವಲ ಡಿಕೆಶಿಯ ಬಳಿ ಅಷ್ಟೊಂದು ಹಣ ಇದ್ದರೇ ಅದರಿಂದ ಆರ್ಥಿಕ ಬೆಳವಣಿಗೆ ಆಗುವುದಿಲ್ಲ. ಬಡವರ ಜೇಬಿನಲ್ಲಿ ಹಣವಿರಬೇಕು ಎಂದು ಕುಟುಕಿದ್ದಾರೆ.

ಮಾನ್ಯ ಮುಖ್ಯಮಂತ್ರಿಗಳ ಆಶಯ ಸರಿಯಾಗಿಯೇ ಇದೆ. ಬಡವರ ಜೇಬಿನಲ್ಲಿ ಹಣವಿದ್ದರೆ ಮಾತ್ರ ಆರ್ಥಿಕತೆ ಬೆಳವಣಿಗೆಯಾಗುತ್ತದೆ. ರಾಷ್ಟ್ರದಲ್ಲೇ ಅತ್ಯಂತ ಶ್ರೀಮಂತ ಶಾಸಕ ಡಿ.ಕೆ ಶಿವಕುಮಾರ್. ಅವರ ಬಳಿ 1,416 ಕೋಟಿ ಇದೆಯಂತೆ. ಸಿಎಂ ಸಿದ್ದರಾಮಯ್ಯ ಅವೆರೇ ದಯವಿಟ್ಟು ಆ ದುಡ್ಡನ್ನು ಬಡವರಿಗೆ ಹಂಚುವುದಕ್ಕೆ ಹೇಳಿ ಎಂದು ಕಾಲೆಳೆದಿದ್ದಾರೆ.

ಸಿದ್ದರಾಮಯ್ಯ ಹೇಳಿದ್ದೇನು?

ಬೆಂಗಳೂರಿನಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು, ಬರೀ ಅಂಬಾನಿ-ಅದಾನಿ ಜೇಬಿನಲ್ಲಿ ಹಣ ಇದ್ದರೆ ಬಡವರ, ಮಧ್ಯಮ ವರ್ಗದವರ ಉದ್ಧಾರ ಸಾಧ್ಯವಿಲ್ಲ. ತಿಮ್ಮ-ಬೋರ-ಕಾಳನ ಜೇಬಿನಲ್ಲಿ ಹಣ ಇದ್ದರೆ ಮಾತ್ರ ಆರ್ಥಿಕತೆ ಬೆಳವಣಿಗೆ ಆಗುತ್ತದೆ. ದುಡಿಯುವವರ, ಶ್ರಮಿಕರ ಜೇಬಿನಲ್ಲಿ ಹಣ ಇದ್ದರೆ ಅವರು ದೇಶದ ಆರ್ಥಿಕತೆಯ ಬೆಳವಣಿಗೆಗೆ ಕಾರಣರಾಗುತ್ತಾರೆ. ಕೇವಲ ಅಂಬಾನಿ, ಅದಾನಿ ಜೇಬು ತುಂಬಿಸುವವರ ಕೈಗೆ ಅಧಿಕಾರ ಕೊಟ್ಟು ಇಡೀ ದೇಶ ಪರಿತಪಿಸುವಂತಾಗಿದೆ ಎಂದು ಹೇಳಿಕೆ ನೀಡಿದ್ದರು.

RELATED ARTICLES

Related Articles

TRENDING ARTICLES