ಮಂಡ್ಯ : ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತರ ಮೇಲೆ ಕಾಡು ಹಂದಿಯೊಂದು ದಾಳಿ ನಡೆಸಿದ್ದು, ಇಬ್ಬರಿಗೆ ಗಂಭೀರ ಗಾಯಗೊಂಡಿದ್ದಾರೆ ಘಟನೆ ಮಳವಳ್ಳಿ ತಾಲೂಕಿನ ದೇವಿರಹಳ್ಳಿಯಲ್ಲಿ ನಡೆದಿದೆ.
ಗ್ರಾಮದ ರಮೇಶ ಎಂಬಾತ ನಿನ್ನೆ ಸಂಜೆ ಜಮೀನಿನಲ್ಲಿ ಇಪ್ಪನೇರಳೆ ಸೊಪ್ಪು ಕೊಯ್ಯುವ ವೇಳೆ ಕಾಡುಹಂದಿಯೊಂದು ಬಂದಿದ್ದು, ರೈತನ ಮೇಲೆ ಏಕಾಏಕಿ ದಾಳಿ ನಡೆಸಿದೆ. ಈ ವೇಳೆ ರಮೇಶನ ರಕ್ಷಣೆಗೆಂದು ಬಂದ ಪಕ್ಕದ ಜಮೀನಿನ ಮತ್ತಿಬ್ಬರು ರೈತರ ಮೇಲೆ ಸಹ ದಾಳಿ ನಡೆಸಿದ ಕಾಡು ಹಂದಿ.
ಇದನ್ನು ಓದಿ : ಸಿಲಿಂಡರ್ ಸ್ಪೋಟಗೊಂಡು ವ್ಯಕ್ತಿ ಸಾವು
ರಮೇಶ ಹಾಗೂ ಸಹಾಯಕ್ಕೆ ಬಂದ ಶಿವಲಿಂಗೇಗೌಡ ಎಂಬುವವರಿಗೆ ಗಂಭೀರ ಗಾಯಗೊಂಡಿದ್ದು, ಮಳವಳ್ಳಿ ಪಟ್ಟಣದ ಆಸ್ಪತ್ರೆಗೆ ರವಾನಿಸಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯ ಮಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನಾ ಹಿನ್ನೆಲೆ ಕಾಡು ಹಂದಿಗಳ ಸೆರೆಹಿಡಿಯಲು ಅರಣ್ಯ ಇಲಾಖೆಗೆ ಮನವಿ ಮಾಡಿಕೊಂಡ ಗ್ರಾಮಸ್ಥರು.