Wednesday, January 22, 2025

ಶಾಸಕ ಅಜಯ್ ಸಿಂಗ್ ಮನೆಯಲ್ಲೇ ವಾಚ್‌ಮನ್ ಆತ್ಮಹತ್ಯೆ

ಕಲಬುರಗಿ : ಜೇವರ್ಗಿ ಕಾಂಗ್ರೆಸ್ ಶಾಸಕ ಅಜಯ್ ಸಿಂಗ್ ನಿವಾಸದ ಆವರಣದಲ್ಲಿ ಯುವಕನೋರ್ವ ನಿಗೂಢವಾಗಿ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಅಜಯ್‌ಸಿಂಗ್ ನಿವಾಸದಲ್ಲಿ ವಾಚ್‌ಮನ್ ಆಗಿ ದೇವೇಂದ್ರ ಕೆಲಸ ಮಾಡುತ್ತಿದ್ದ. ಈತ ಬಿಹಾರದ ಪಟ್ನಾ ಗ್ರಾಮದ ನಿವಾಸಿ. ಈತನ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ.

ಶಾಸಕ ಡಾ.ಅಜಯ್‌ ಸಿಂಗ್ ನಿವಾಸದಲ್ಲಿ ಕಳೆದ ಎರಡು‌-ಮೂರು ವರ್ಷಗಳಿಂದ ದೇವೇಂದ್ರ ವಾಚ್​ಮ್ಯಾನ್​​ ಆಗಿ ಕೆಲಸ ಮಾಡ್ತಿದ್ದ. ಅಪರೂಪಕ್ಕೆ ತನ್ನೂರು‌ ಪಟ್ನಾ ಗ್ರಾಮಕ್ಕೆ ಹೋಗ್ತಿದ್ದನಂತೆ. ಶಾಸಕರ‌ ಮನೆಯಲ್ಲಿ ಕೆಲಸ‌ ಮಾಡಿಕೊಂಡು ಜೀವನ‌ ಮಾಡುತ್ತಿದ್ದ ದೇವೇಂದ್ರ ಆಗೊಮ್ಮೆ ಈಗೊಮ್ಮೆ ಎನ್ನುವಂತೆ ಆಟೋ ಓಡಿಸಿಕೊಂಡು ಸಹ ದುಡಿಯುತ್ತಿದ್ದನಂತೆ. ಕಳೆದ ಐದು‌ ವರ್ಷಗಳ ಹಿಂದೆ ದೇವೇಂದ್ರನ ಪತ್ನಿ‌ ಸಹ  ಸಾವನ್ನಪ್ಪಿದ್ದು, ದೇವೇಂದ್ರ ಮಾನಸಿಕವಾಗಿ‌ ಸ್ವಲ್ಪ‌ ಕುಗ್ಗಿದ್ದ ಎನ್ನಲಾಗಿದೆ.

2ನೇ ಮದುವೆಗೂ‌ ಮನೆಯಲ್ಲಿ ಒತ್ತಾಯ

ಎರಡನೇ ಮದುವೆಗೂ‌ ಮನೆಯಲ್ಲಿ ಒತ್ತಾಯ ಮಾಡಿದ್ದರು ಸಹ ಒಲ್ಲೆ ಎಂದಿದ್ದನಂತೆ. ಇನ್ನು ಕುಡಿತ ಹಾಗೂ‌ ಜೂಜಾಟಕ್ಕೆ ದಾಸನಾಗಿ ಹಲವು ಕಡೆ ಸಾಲವನ್ನು ಮಾಡಿಕೊಂಡಿದ್ದ ಎನ್ನಲಾಗಿದೆ. ಇತ್ತೀಚೆಗೆ ಪಟ್ನಾಗೆ ಹೋಗಿದ್ದ ದೇವೇಂದ್ರ, ಊರಲ್ಲಿ ಸಿಕ್ಕವರಿಗೆ ಇದು ನನ್ನ‌ ಕೊನೆ‌ ನಮಸ್ಕಾರ ಎಂದು ಹೇಳುತ್ತಿದ್ದನಂತೆ.

ಟೀ ಕುಡಿಸು, ಕೊನೆ‌ ಸಲ ಕುಡಿಯುತ್ತೇನೆ

ಇನ್ನೊಬ್ಬರ ಬಳಿ ಟೀ ಕುಡಿಸು, ಕೊನೆ‌ಸಲ ಕುಡಿಯುತ್ತೇನೆ ಎಂದು ಸಹ ಹೇಳಿದ್ದನಂತೆ. ಆದರೆ, ಈತನ ಮಾತಿನ ಮರ್ಮ ಯಾರಿಗೂ ತಿಳಿದಿಲ್ಲ. ಊರಿಂದ ಬುಧವಾರ ತಡರಾತ್ರಿ ಅಜಯ್​​ ಸಿಂಗ್​ ಮನೆಗೆ ಬಂದ ದೇವೇಂದ್ರ ಮರಕ್ಕೆ ನೇಣು‌ಬಿಗಿದುಕೊಂಡು ಆತ್ಮಹತ್ಯೆ‌ ಮಾಡಿಕೊಂಡಿದ್ದಾನೆ. ಸ್ಥಳಕ್ಕೆ ಬ್ರಹ್ಮಪುರ ಪೊಲೀಸರು‌ ಹಾಗೂ ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

RELATED ARTICLES

Related Articles

TRENDING ARTICLES