Monday, November 25, 2024

ಕಾಂಗ್ರೆಸ್ ಸಚಿವರ ಹೊಸ ಜವಾಬ್ದಾರಿಗಳ ಪಟ್ಟಿ ರಿಲೀಸ್ ಮಾಡಿದ ಬಿಜೆಪಿ

ಬೆಂಗಳೂರು : ಕಾವೇರಿ ನೀರನ್ನು ತಮಿಳುನಾಡಿಗೆ ಬಿಟ್ಟಿರುವ ಕಾಂಗ್ರೆಸ್​ ಸರ್ಕಾರದ ನಡೆಯನ್ನು ರಾಜ್ಯ ಬಿಜೆಪಿ ಲೇವಡಿ ಮಾಡಿದೆ.

ಈ ಕುರಿತು ಟ್ವೀಟ್ ಮಾಡಿ, ತಮಿಳುನಾಡಿನ ಸಿಎಂ ಎಂ.ಕೆ‌. ಸ್ಟಾಲಿನ್ ಅವರು ಕರ್ನಾಟಕದ ತಮ್ಮ ಸ್ವಾರ್ಥದ ಮೈತ್ರಿಕೂಟದ ಸಚಿವರಿಗೆ ಕಾವೇರಿ ನದಿ ನೀರು ವಿಚಾರದಲ್ಲಿ ನೀಡಿರುವ ಹೊಸ ಜವಾಬ್ದಾರಿಗಳ ಪಟ್ಟಿ ರಿಲೀಸ್ ಮಾಡಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಾವೇರಿ ವಿವಾದ ಬಗೆಹರಿಯುವ ತನಕ ಮೌನಕ್ಕೆ ಶರಣಾಗುವುದು. ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಕೆ.ಆರ್.ಎಸ್ ನಿಂದ ಬಿಡುವ ನೀರು ತಮಿಳುನಾಡು ತಲುಪುವ ತನಕ, ಕೊಂಚವೂ ತೊಂದರೆ ಬಾರದಂತೆ ನೋಡಿಕೊಳ್ಳುವ ಜವಾಬ್ದಾರಿ ನೀಡಿದೆ ಎಂದು ಕುಟುಕಿದೆ.

ಇದನ್ನೂ ಓದಿ : ಮೋದಿಗೆ ಈ ಹಿರಿಮೆ ಸಲ್ಲುತ್ತದೆ : ಎಂ.ಬಿ ಪಾಟೀಲ್ ಬಣ್ಣನೆ

ಇದು ಖರ್ಗೆ ಜವಾಬ್ದಾರಿ

ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅವರಿಗೆ ಕಾವೇರಿ ಕೊಳ್ಳದಲ್ಲಿ ರಾಜ್ಯದ ರೈತರು ಹೊಸದಾಗಿ ಬಿತ್ತನೆ ಮಾಡದಂತೆ ತಡೆಯುವುದು. ಪ್ರಿಯಾಂಕ್ ಖರ್ಗೆ ಅವರಿಗೆ ತಮಿಳುನಾಡಿಗೆ ನೀರು ಹರಿಬಿಟ್ಟ ಕಾಂಗ್ರೆಸ್​ ಸರ್ಕಾರದ ನೀತಿಯನ್ನು ವಿರೋಧಿಸಿ, ಸೋಶಿಯಲ್ ಮೀಡಿಯಾಗಳಲ್ಲಿ ಬರೆಯುವವರ ವಿರುದ್ಧ ಎಫ್ಐಆರ್ ಹಾಕಿಸುವ ಹೊಣೆ ನೀಡಲಾಗಿದೆ ಎಂದು ವ್ಯಂಗ್ಯವಾಡಿದೆ.

ಕಾಂಗ್ರೆಸ್ ಸರ್ಕಾರಕ್ಕೆ ರಾಜ್ಯದ ರೈತರ ಹಿತಾಸಕ್ತಿಗಿಂತಲೂ, ತಮ್ಮ ಸ್ವಾರ್ಥ ಮೈತ್ರಿಕೂಟದ ಸ್ನೇಹಿತರ ಹಿತಾಸಕ್ತಿಯನ್ನು ಕಾಪಾಡುವುದೇ ಮುಖ್ಯವಾಗಿದೆ ಎಂದು ವಾಗ್ದಾಳಿ ನಡೆಸಿದೆ.

RELATED ARTICLES

Related Articles

TRENDING ARTICLES